Friday, 22nd June 2018

Recent News

5 hours ago

ರಾಜಕೀಯ ಲಾಭಕ್ಕಾಗಿ ಕುರಿ ಕಾಯುತ್ತಿರುವ ರಾಯಬಾಗ ಬಿಜೆಪಿ ಶಾಸಕ

ಬೆಳಗಾವಿ: ರಾಜಕೀಯ ಲಾಭಕ್ಕಾಗಿ ರಾಜಕಾರಣಿಗಳು ಏನೂ ಬೇಕಾದರೂ ಮಾಡುತ್ತಾರೆ. ಅದಕ್ಕೆ ಸಾಕ್ಷಿಯೆನ್ನುವಂತೆ ಬಿಜೆಪಿ ಶಾಸಕರೊಬ್ಬರು ಕುರಿ ಕಾಯುತ್ತಿದ್ದಾರೆ. ಹೌದು, ರಾಜಕೀಯದಲ್ಲಿ ಹಿನ್ನಡೆ ಆಗದಿರಲಿ ಎಂದು ಬೆಳಗಾವಿ ಜಿಲ್ಲೆಯ ರಾಯಬಾಗ ಕ್ಷೇತ್ರದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು ಕುರಿ ಮೇಯಿಸುತ್ತಾ ಮಡ್ಡಿಯಲ್ಲಿ ಅಡ್ಡಾಡುತ್ತಿದ್ದಾರೆ. ಹೆಗಲ ಮೇಲೆ ಕಂಬಳಿ ಹಾಕಿಕೊಂಡು ಕೈಯಲ್ಲಿ ಕೋಲು ಹಿಡಿದುಕೊಂಡು ರಾಯಬಾಗ ತಾಲೂಕಿನ ನಾಗರಾಳ ಗ್ರಾಮದ ಹೊರವಲಯದ ಮಡ್ಡಿಗಾಡಿನ ಪ್ರದೇಶದಲ್ಲಿ ಕುರಿ ಕಾಯುತ್ತಾ ಇದ್ದಾರೆ. ಕುರಿ ಕಾಯೋದು ಯಾಕೆ? ಮಹಾರಾಷ್ಟ್ರದಿಂದ ರಾಜ್ಯಕ್ಕೆ ಆಗಮಿಸಿರುವ ಸಂತ […]

15 hours ago

ಎಟಿಎಂನಿಂದ ಡ್ರಾ ಮಾಡ್ದಾಗ ಸುಟ್ಟ, ಹರಿದ, ಮಸಿ ಮೆತ್ತಿಕೊಂಡ 6 ನೋಟುಗಳು ಬಂದ್ವು!

ಬೆಳಗಾವಿ: ಎಸ್‍ಬಿಐ ಗೆ ಸೇರಿದ ಎಟಿಎಂ ಕೇಂದ್ರದಲ್ಲಿ ಸುಟ್ಟ ಹಾಗೂ ಹರಿದ ನೋಟುಗಳು ಗ್ರಾಹಕರಿಗೆ ದೊರೆತಿರುವ ಘಟನೆ ಜಿಲ್ಲೆಯ ಹುಕ್ಕೇರಿ ತಾಲೂಕಿನ ಕಣಗಲಾ ಗ್ರಾಮದಲ್ಲಿ ನಡೆದಿದೆ. ಪೂನಾ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 4ಕ್ಕೆ ಹೊಂದಿಕೊಂಡ ಹಿಂದೂಸ್ತಾನ ಲೇಟೆಕ್ಸ್ ಕಂಪೆನಿ ನೌಕರ ರಫೀಕ್ ಭಾಗವಾನ, ಕಣಗಲಾ ಗ್ರಾಮದ ಎಟಿಎಂ ನಿಂದ ಹಣ ಡ್ರಾ ಮಾಡಿದಾಗ ಈ ನೋಟುಗಳು ಪತ್ತೆಯಾಗಿವೆ....

ಹೊಸ ಬಜೆಟ್ ನಿರ್ಧಾರವನ್ನು ಬೆಂಬಲಿಸ್ತೀನಿ, ಬೇಗ ಸಂಪುಟ ವಿಸ್ತರಣೆ ಆಗಬೇಕು: ಸತೀಶ್ ಜಾರಕಿಹೊಳಿ

5 days ago

ಬೆಳಗಾವಿ: ಹೊಸ ಸರ್ಕಾರದ ಹೊಸ ಬಜೆಟ್ ಮಾಡುವ ನಿರ್ಧಾರವನ್ನು ನಾನು ನಾನು ಬೆಂಬಲಿಸುತ್ತೇನೆ ಎಂದು ಕಾಂಗ್ರೆಸ್ ಶಾಸಕ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಹಿಂದೆ ಕೂಡ ಹೊಸ ಸರ್ಕಾರ ಬಂದಾಗ ಬಜೆಟ್ ಮಂಡನೆ ಮಾಡಲಾಗಿತ್ತು. ಈಗ ಹೊಸ...

ಉತ್ತರ ಕನ್ನಡ ಭಾಗದಲ್ಲಿ ಸೇವೆ ಅಂದ್ರೆ ಕೆಲಸ: ಜಯಮಾಲಾಗೆ ಹೆಬ್ಬಾಳ್ಕರ್ ಟಾಂಗ್

5 days ago

ಬೆಳಗಾವಿ: ಉತ್ತರ ಕನ್ನಡ ಭಾಗದಲ್ಲಿ ಸೇವೆ ಎಂದರೆ ಕೆಲಸ ಎಂದು ಹೇಳುವ ಮೂಲಕ ಕಾಂಗ್ರೆಸ್ ಶಾಸಕಿ ಲಕ್ಷ್ಮಿ ಹೆಬ್ಬಾಳ್ಕರ್ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಜಯಮಾಲಾ ಅವರಿಗೆ ತಿರುಗೇಟು ನೀಡಿದ್ದಾರೆ. ಸೇವೆ ಪದವನ್ನು ಅನರ್ಥ ಮಾಡಿಕೊಳ್ಳಬೇಡಿ. ಉತ್ತರ ಕರ್ನಾಟಕದಲ್ಲಿ ಸೇವೆ...

10ನೇ ತರಗತಿ ವಿದ್ಯಾರ್ಥಿ ಆತ್ಮಹತ್ಯೆಗೆ ಶರಣು

6 days ago

ಬೆಳಗಾವಿ: ಪ್ರೌಢಶಾಲಾ ವಿದ್ಯಾರ್ಥಿಯೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟೆನೆ ಜಿಲ್ಲೆಯ ಅಥಣಿ ತಾಲೂಕಿನ ಚಮಕೇರಿ ಗ್ರಾಮದಲ್ಲಿ ನಡೆದಿದೆ. ಜಯವಂತ ಮಗದುಮ (17) ಮೃತಪಟ್ಟ ವಿದ್ಯಾರ್ಥಿಯಾಗಿದ್ದು, ಇವರು ವಿಜಯಪುರ ಜಿಲ್ಲೆಯ ಕೆಂಗಲಗುತ್ತಿ ಗ್ರಾಮದಲ್ಲಿ ನಿವಾಸಿ. ಜಯವಂತ ಚಮಕೇರಿ ಗ್ರಾಮದಲ್ಲಿರುವ ಶ್ರೀ ಶಿವಲಿಂಗೇಶ್ವರ ಪ್ರೌಢ ಶಾಲೆಯಲ್ಲಿ...

ನಡುರಸ್ತೆಯಲ್ಲಿ ಮಹಿಳೆಗೆ ಮಹಿಳೆಯರಿಂದ್ಲೇ ಚಪ್ಪಲಿಯಿಂದ ಬಿತ್ತು ಗೂಸಾ!

6 days ago

ಚಿಕ್ಕೋಡಿ: ಹಣಕಾಸಿನ ವಿಚಾರವಾಗಿ ನಡುರಸ್ತೆಯಲ್ಲೇ ಇಬ್ಬರು ಮಹಿಳೆಯರು ಕೂಡಿ ಓರ್ವ ಮಹಿಳೆಗೆ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ನಡೆದಿದೆ. ಅಥಣಿ ಪಟ್ಟಣದ ಮುಖ್ಯ ರಸ್ತೆಯಲ್ಲಿಯೇ ಸಾರ್ವಜನಿಕವಾಗಿ ರಸ್ತೆಯ ಮೇಲೆ ಎಳೆದುಕೊಂಡು ಹೋಗಿ ಚಪ್ಪಲಿಯಿಂದ ಇಬ್ಬರು...

ತಮಾಷೆ ಮಾಡಲು ಹೋಗಿ ಪ್ರಾಣ ಕಳೆದುಕೊಂಡ – ಜಲಪಾತದಿಂದ ಕೆಳಗೆ ಬೀಳುವ ದೃಶ್ಯ ಸೆರೆ

6 days ago

ಬೆಳಗಾವಿ: ಇಲ್ಲಿನ ಗೋಕಾಕ್ ಫಾಲ್ಸ್ ನಲ್ಲಿ ಈಜಲು ಹೋಗಿ ವ್ಯಕ್ತಿಯೊಬ್ಬ ಮೃತಪಟ್ಟಿರುವ ಘಟನೆ ಜಿಲ್ಲೆಯಲ್ಲಿ ನಡೆದಿದೆ. ಘಟಪ್ರಭಾದ ನಿವಾಸಿ ರೆಹಮಾನ್ ಉಸ್ಮಾನ್ ಕಾಜಿ (35) ಮೃತ ದುರ್ದೈವಿ. ಉಸ್ಮಾನ್ ರಂಜಾನ್ ಇದ್ದ ಪ್ರಯುಕ್ತ ಸ್ನೇಹಿತರ ಜೊತೆ ಗೋಕಾಕ್ ಫಾಲ್ಸ್ ಗೆ ಹೋಗಿದ್ದಾನೆ....

ವೀರಶೈವರ ಜೊತೆಗೆ ಲಿಂಗಾಯತರು ಸೇರಲ್ಲ: ಸಿದ್ದರಾಮ ಸ್ವಾಮೀಜಿ

1 week ago

ಬೆಳಗಾವಿ: ಲಿಂಗಾಯತ ಪ್ರತ್ಯೇಕ ಧರ್ಮಕ್ಕೆ ಹಿಂದುತ್ವ ಪ್ರತಿಪಾದಕ ಪಕ್ಷದಿಂದ ವಿರೋಧ ವ್ಯಕ್ತವಾಗುತ್ತಿದೆ ಎಂದು ನಾಗನೂರು ರುದ್ರಾಕ್ಷಿ ಮಠದ ಡಾ. ಸಿದ್ದರಾಮ ಸ್ವಾಮೀಜಿಗಳು ಹೇಳಿದ್ದಾರೆ. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜೈನ, ಸಿಖ್, ಬೌದ್ಧ ಧರ್ಮೀಯರು ಸ್ವತಂತ್ರವಾಗಿ ಪ್ರತ್ಯೇಕ ಧರ್ಮ ಮಾಡಿಕೊಂಡಿದ್ದಾರೆ. ಆದರೆ...