Wednesday, 19th July 2017

4 days ago

ಬೆಳಕು ಇಂಪ್ಯಾಕ್ಟ್: ಸಹೋದರಿಯರ ವಿದ್ಯಾಭ್ಯಾಸಕ್ಕೆ ಹಣ ಕಟ್ಟಲು ನೆರವು

ದಾವಣಗೆರೆ: ಈ ಸಹೋದರಿಯರಿಗೆ ಓದು ಎಂದರೆ ಪಂಚಪ್ರಾಣ, ಶಾಲೆಯಲ್ಲಿ ಯಾರಿಗೂ ಕಮ್ಮಿ ಇಲ್ಲ ಎನ್ನುವಂತೆ ಓದುತ್ತಿದ್ದರು. ಆದ್ರೆ ವಿಧಿ ಮಾತ್ರ ಇವರ ಜೀವನದಲ್ಲಿ ಆಟವಾಡಿತ್ತು. ವಿದ್ಯಾಭ್ಯಾಸಕ್ಕೆ ಹಣ ಕಟ್ಟಲು ಹಣವಿಲ್ಲದೇ ಒದ್ದಾಡುವಂತ ಪರಿಸ್ಥಿತಿ ಬಂದೊದಗಿತ್ತು. ಆದ್ರೆ ಈ ಸಹೋದರಿಯರಿಗೆ ಪಬ್ಲಿಕ್ ಟಿವಿಯ ಬೆಳಕು ಕಾರ್ಯಕ್ರಮ ನೆರವಿಗೆ ಬಂದಿದೆ. ತಮಗೆ ಮುಂದಿನ ವಿದ್ಯಾಭ್ಯಾಸಕ್ಕೆ ಯಾವುದೇ ತೊಂದರೆಯಾಗದು ಎನ್ನುವ ಖುಷಿಯನ್ನು ಸಹೋದರಿಯರು ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಮಕ್ಕಳ ಅನಂದವನ್ನು ನೋಡಿ ಅವರ ತಾಯಿಯು ಸಹ ಸಂತೋಷವನ್ನು ವ್ಯಕ್ತಪಡಿಸಿದ್ದಾರೆ. ನಗರದ ಶ್ರೀರಾಮ ನಗರದ […]

4 days ago

ಬೆಳಕು ಇಂಪ್ಯಾಕ್ಟ್: ಐಸ್ ಮಾರಿಕೊಂಡು ಜೀವನ ಸಾಗಿಸುತ್ತಿದ್ದ ಬಾಲಕನಿಗೆ ನೆರವಾಯ್ತು `ಬೆಳಕು’ ಕಾರ್ಯಕ್ರಮ

ದಾವಣಗೆರೆ: ಐಸ್ ಮಾರಿಕೊಂಡು ಜೀವನ ಸಾಗಿಸುತ್ತಾ ಮನೆ ಜವಬ್ದಾರಿಯ ಜೊತೆಗೆ ಓದಬೇಕು ಎನ್ನುವ ಆಸೆಯ ಜೊತೆಗೆ ಮನೆಯಲ್ಲಿ ಆಂಗವಿಕಲೆ ಅಕ್ಕನನ್ನು ತಾಯಿಯನ್ನು ನೋಡಿಕೊಳ್ಳುವ ಜವಾಬ್ದಾರಿ ಹೊಂದಿರುವ ಬಾಲಕನ ನೆರವಿಗೆ ಪಬ್ಲಿಕ್ ಟಿವಿ ಬೆಳಕು ಕಾರ್ಯಕ್ರಮ ಬಂದಿದೆ. ದಾವಣಗೆರೆಯ ತಿಪ್ಪೇಶ್ ಕಳೆದ ಹಲವು ವರ್ಷಗಳಿಂದ ಬಸ್ ನಿಲ್ದಾಣಗಳಲ್ಲಿ ಐಸ್ ಹಾಗೂ ಚಿಪ್ಸ್ ಮಾರಿಕೊಂಡು ಶಾಲೆಯ ಶುಲ್ಕ ಕಟ್ಟಿಕೊಂಡು...

ಮುಪ್ಪಿನ ಕಾಲದಲ್ಲಿ ಈ ಬಡಜೀವಗಳಿಗೆ ಬೇಕಿದೆ ಒಂದು ಪುಟ್ಟ ಮನೆಯ ಆಸರೆ

2 weeks ago

ರಾಯಚೂರು: ಮುಪ್ಪಾದ ಕಾಲಕ್ಕೆ ಮಕ್ಕಳು ಇರದಿದ್ದರೂ ಒಂದು ಸೂರು, ತುತ್ತು ಅನ್ನ ಇದ್ರೆ ವಯೋವೃದ್ಧರು ಹೇಗೋ ಇರುವಷ್ಟು ದಿನ ಪಾಲಿಗೆ ಬಂದಿದ್ದು ಪಂಚಾಮೃತ ಅಂತ ಕಾಲ ದೂಡ್ತಾರೆ. ಆದ್ರೆ ರಾಯಚೂರಿನ ಈ ಇಬ್ಬರು ಅಜ್ಜಿಯರು ಎಲ್ಲರೂ ಇದ್ದೂ ಏನೂ ಇಲ್ಲದಂತೆ ಬದುಕುತ್ತಿದ್ದಾರೆ....

ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ- ಅನಕ್ಷರಸ್ಥ ಯುವಕನ ಯೋಗಾಭ್ಯಾಸಕ್ಕಾಗಿ ಬೇಕಿದೆ ಸಹಾಯ

2 weeks ago

ಬೆಳಗಾವಿ: ಗುರುವಿಲ್ಲದೆ ಯೋಗ ಕಲಿತ ಆಧುನಿಕ ಏಕಲವ್ಯ ಇವರು. ಗುರು ರಾಮದೇವ ಬಾಬಾ ಅವರ ಯೋಗಾಸನವನ್ನು ಟಿವಿಯಲ್ಲಿ ನೋಡಿ ಕಲಿತಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ತಾಲೂಕಿನ ಉಗುರಗೊಳದ ಅನಕ್ಷರಸ್ಥ ಯುವಕ ಬುಡನ್ ಇತರರಿಗೆ ಯೋಗಾಭ್ಯಾಸ ಹೇಳಿಕೊಡಲು ಸಹಾಯ ಹಸ್ತ ಚಾಚಿದ್ದಾರೆ. ಗಾರೆ...

ಪಿಯುಸಿ ವಿಜ್ಞಾನ ವಿಭಾಗದಲ್ಲಿ 82.5% ಅಂಕ- ಎಂಜಿನಿಯರಿಂಗ್ ಓದೋ ಆಸೆಗೆ ಹಣದ ಸಮಸ್ಯೆ

2 weeks ago

ಕೊಪ್ಪಳ: ಓದಬೇಕೆನ್ನುವ ಹಂಬಲದಿಂದ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿರುವ ಯುವಕನಿಗೆ ಉನ್ನತ ವ್ಯಾಸಂಗಕ್ಕಾಗಿ ಕಾಲೇಜು ಸೇರಲು ಬಡತನ ಅಡ್ಡಿಯಾಗಿದೆ. ಇದ್ದೊಬ್ಬ ಮಗನಿಗೆ ಬಡತನದಲ್ಲಿಯೂ ತಾಯಿ ಕಷ್ಟಪಟ್ಟು ಓದಿಸ್ತಾಯಿದ್ದಾರೆ. ಆದ್ರೀಗ ಎಂಜಿನಿಯರಿಂಗ್ ಓದೋ ಆಸೆಗೆ ಹಣಕಾಸಿನ ತೊಂದ್ರೆ ಆಗಿದೆ. ಸದ್ಯ ಪಬ್ಲಿಕ್...

SSLCಯಲ್ಲಿ ಉತ್ತಮ ಅಂಕ ಗಳಿಸಿದ ಬಡ ಪ್ರತಿಭಾವಂತ ವಿದ್ಯಾರ್ಥಿನಿಯರ ಮುಂದಿನ ಶಿಕ್ಷಣಕ್ಕೆ ಬೇಕಿದೆ ಸಹಾಯ

4 weeks ago

ಕೊಪ್ಪಳ: ಅವರಿಬ್ಬರೂ ಪ್ರತಿಭಾವಂತ ಹೆಣ್ಣು ಮಕ್ಕಳು. ಯಾವುದೇ ಟ್ಯೂಷನ್‍ಗೆ ಹೋಗ್ದೆ ಎಸ್‍ಎಸ್‍ಎಲ್ಸಿ ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿದವರು. ಆದ್ರೆ ಮುಂದೆ ಓದೋಕೆ ಇವ್ರಿಗೆ ಆರ್ಥಿಕ ತೊಂದರೆ ಎದುರಾಗಿದೆ. ಕಾಲೇಜು ಫೀಸ್ ಕಟ್ಟೋಕಾಗದೆ ಮುಂದಿನ ಭವಿಷ್ಯ ಕಮರಿಹೋಗುತ್ತೆ ಅನ್ನೋ ಆತಂಕದಲ್ಲಿದ್ದಾರೆ. ಬಡತನದಲ್ಲಿ ಅರಳಿದ ಪ್ರತಿಭೆಗಳು...

ಮಾತು ಬಾರದ, ಕಿವಿ ಕೇಳದ 3 ವರ್ಷದ ಮಗುವಿಗೆ ಶ್ರವಣಯಂತ್ರ ಖರೀದಿಸಲು ಬೇಕಿದೆ ಸಹಾಯ

4 weeks ago

ಬಳ್ಳಾರಿ: ಈ ಬಾಲಕನಿಗಿನ್ನೂ ಮೂರು ವರ್ಷ ವಯಸ್ಸು. ತೊದಲು ನುಡಿಯಾಡುತ್ತಾ ಹೆತ್ತವರನ್ನು ನಗಿಸಿ, ನಲಿಯಬೇಕಾದ ಈ ಬಾಲಕನಿಗೆ ಮಾತೇ ಬರಲ್ಲ. ಅಷ್ಟೆ ಅಲ್ಲ ಕಿವಿಯೂ ಸಹ ಕೇಳಲ್ಲ. ಹೀಗಾಗಿ ಹೆತ್ತವರಿಗೆ ಈತನದ್ದೆ ಚಿಂತೆ. ಮಗನ ಬಾಯಲ್ಲಿ ಅಮ್ಮ ಅಪ್ಪಾ ಅಂತಾ ಮಾತು...

ಪೋಷಕರು ಬಿಟ್ಟು ಹೋದ ಬುದ್ಧಿಮಾಂದ್ಯ ಮೊಮ್ಮಗನನ್ನು ಕೂಲಿ ಮಾಡಿ ಸಾಕ್ತಿರೋ ಅಜ್ಜಿ- ಚಿಕಿತ್ಸೆಗೆ ಬೇಕಿದೆ ನೆರವು

4 weeks ago

ವಿಜಯಪುರ: ಹೆತ್ತವರಿಗೆ ಹೆಗ್ಗಣ ಕೂಡ ಮುದ್ದು ಅಂತಾರೆ. ತಂದೆ ತಾಯಿಗೆ ಮಕ್ಕಳು ಹೇಗಿದ್ದರೂ ಅವರೇ ಸರ್ವಸ್ವವಿದ್ದಂತೆ. ಆದ್ರೆ ಮಗಿನಿಗೆ ಫಿಟ್ಸ್ ಇದೆ, ಬುದ್ಧಿಮಾಂದ್ಯನಾಗಿದ್ದಾನೆ ಅಂತಾ ಅಜ್ಜಿ ಹತ್ತಿರ ಮಗನನ್ನು ಬಿಟ್ಟು ತಂದೆ ತಾಯಿ ನಾಪ್ತೆಯಾಗಿದ್ದಾರೆ. ಈಗ ಈ ಬುದ್ಧಿಮಾಂದ್ಯ ಮಗುವಿಗೆ ಅಜ್ಜಿಯೇ...