ಬೀಜಿಂಗ್: ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುವವರಿಗೆ ಎಚ್ಚರಿಕೆ ನೀಡುವ ಹಾಗೂ ನೋಡುಗರಲ್ಲಿ ನಡುಕ ಹುಟ್ಟಿಸುವ ಘಟನೆಯೊಂದು ಚೀನಾದಲ್ಲಿ ನಡೆದಿದ್ದು ವಿಡಿಯೋ ವೈರಲ್ ಆಗಿದೆ.
ಚೀನಾ ದೇಶದ ಲಿಯುಝಾದಲ್ಲಿ ಏಪ್ರಿಲ್ 10 ರಂದು ವ್ಯಕ್ತಿಯೊಬ್ಬ ಕುಡಿದ ಅಮಲಿನಲ್ಲಿ ಕಾರನ್ನು ವೇಗವಾಗಿ ಚಾಲನೆ ಮಾಡಿ, ರೋಡ್ ಡಿವೈಡರ್ ಮೇಲೆ ಹತ್ತಿಸಿ, ಸೂಚನಾ ಫಲಕ ಹಾಗೂ ದೀಪದ ಕಂಬಕ್ಕೆ ಗುದಿದ್ದಾನೆ. ಪರಿಣಾಮ ಕಾರು ಉರುಳಿ ಬಿದ್ದಿದ್ದರೂ ಅದೃಷ್ಟವಶಾತ್ ಚಾಲಕ ಬದುಕುಳಿದಿದ್ದಾನೆ.
ಘಟನೆಯ ಸ್ಥಳದ ಸಮೀಪದಲ್ಲಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಅಪಘಾತ ವಿಡಿಯೋ ಸೆರೆಸಿಕ್ಕಿದ್ದು, ಅದು ನೋಡುಗರಲ್ಲಿ ನಡುಕ ಹುಟ್ಟಿಸುವಂತಿದೆ.
ಆಗಿದ್ದೇನು?
ವೇಗವಾಗಿ ಬಂದ ಕಾರು ಚಾಲಕನ ನಿಯಂತ್ರಣ ತಪ್ಪಿ, ರೋಡ್ ಡಿವೈಡರ್ ಗೆ ಗುದ್ದಿ ಉರುಳಿ ಬಿದ್ದು, ಎದ್ದು ನಿಂತಿದೆ. ಕಾರಿನ ಮುಂಭಾಗ ಪೂರ್ಣವಾಗಿ ಜಖಂಗೊಂಡಿದ್ದರೂ ಚಾಲಕನಿಗೆ ಯಾವುದೇ ದೊಡ್ಡ ಪೆಟ್ಟು ಸಂಭವಿಸಿಲ್ಲ. ಕಾರು ನಿಂತ ತಕ್ಷಣ ತನ್ನ ಎಡಬದಿಯ ಬಾಗಿಲಿನಿಂದ ಕೆಳಗಿಳಿದು, ಬಟ್ಟೆ, ಮುಖದ ಮೇಲೆನ ದೂಳು ಕೊಡವಿಕೊಳ್ಳುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.