ವಾಷಿಂಗ್ಟನ್: ಡ್ರೈವರ್ ಬಸ್ ಚಲಾಯಿಸುವ ಸಂದರ್ಭದಲ್ಲಿ ಪೇಪರ್ ಓದಿದ್ದಕ್ಕೆ ಕೆಲಸದಿಂದ ಅಮಾನತುಗೊಂಡಿದ್ದಾನೆ.
ಅಮೆರಿಕದ ಮೇರಿಲ್ಯಾಂಡ್ ನಲ್ಲಿ ಬಸ್ ಡ್ರೈವಿಂಗ್ ವೇಳೆಯಲ್ಲಿ ಚಾಲಕ ನ್ಯೂಸ್ ಪೇಪರ್ ಓದುತ್ತಿದ್ದ ದೃಶ್ಯವನ್ನು ಸಹ ಪ್ರಯಾಣಿಕ ತನ್ನ ಮೊಬೈಲ್ನಲ್ಲಿ ವಿಡಿಯೋ ಮಾಡಿಕೊಂಡು ಟ್ವಿಟ್ಟರ್ ನಲ್ಲಿ ಹಾಕಿದ್ದರು. ಈ ದೃಶ್ಯಗಳು ಇಂದು ಸಾಮಾಜಿಕ ಜಾಲದಲ್ಲಿ ವೈರಲ್ ಆಗಿತ್ತು.
ಬಸ್ ಡ್ರೈವರ್ ಅತ್ಯಂತ ನಿಲಕ್ಷ್ಯದಿಂದ ಚಾಲನೆ ಮಾಡುತ್ತಿದ್ದ, ಇದರಿಂದ ತಾನು ಇಳಿಯ ಬೇಕಾದ ಬಸ್ ನಿಲ್ದಾಣವು ತಪ್ಪಿಹೋಯಿತು ಎಂದು ಪ್ರಯಾಣಿಕರೊಬ್ಬರು ಆರೋಪಿಸಿದ್ದಾರೆ.
ಮೆಟ್ರೋ ಬಸ್ ಅಧಿಕಾರಿಗಳು ಈ ದೃಶ್ಯಗಳನ್ನು ಟ್ವಿಟ್ಟರ್ನಲ್ಲಿ ವೀಕ್ಷಿಸಿದ್ದು, ಕಂಪೆನಿಯು ಘಟನೆಯ ಕುರಿತು ತನಿಖೆಯನ್ನು ನಡಸಿದೆ. ಅಷ್ಟೇ ಅಲ್ಲದೇ ಇದು ಕ್ಷಮಿಸಲಾಗದ ತಪ್ಪು ಆದ್ದರಿಂದ ಆತನನ್ನು ಅಮಾನತು ಮಾಡಲಾಗಿದೆ ಎಂದು ತಿಳಿಸಿದ್ದಾರೆ.
Should my bus driver be reading and flipping pages in the newspaper while driving? @wmata @nbcwashington pic.twitter.com/C8aLAzCzqa
— myles ???? (@RunManyMyles) September 8, 2017