ಲವ್ ರಿಜೆಕ್ಟ್; ಪಾಗಲ್ ಪ್ರೇಮಿಯ ಹುಚ್ಚಾಟಕ್ಕೆ ಸುಸ್ತಾದ ಜನ

ಚಿಕ್ಕಮಗಳೂರು: ಯುವತಿ ಪ್ರೀತಿಸೋದಕ್ಕೆ ನಿರಾಕರಿಸಿದಕ್ಕೆ ಪಾಗಲ್ ಪ್ರೇಮಿಯೊಬ್ಬ ಆತ್ಮಹತ್ಯೆ ಮಾಡಿಕೊಳ್ಳಲು ಮುಂದಾದ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ದಾರದಹಳ್ಳಿ ಗ್ರಾಮದಲ್ಲಿ ನಡೆದಿದೆ.

ಹಾಸನ ಜಿಲ್ಲೆ ಬೇಲೂರು ಮೂಲದ ಸಂತೋಷ್ ಕಳೆದ ಮೂರು ವರ್ಷದಿಂದ ಬೇಲೂರಿನ ಯುವತಿಯನ್ನು ಪ್ರೀತಿಸುತ್ತಿದ್ದ. ಅವಳು ಸಂತೋಷ್‍ನನ್ನ ಪ್ರೀತಿಸೋದಕ್ಕೆ ನಿರಾಕರಿಸಿದ್ದಳು. ಆ ಯುವತಿ ಇಂದು ಮೂಡಿಗೆರೆ ತಾಲೂಕಿನ ದಾರದಹಳ್ಳಿಯ ಗ್ರಾಮ ಪಂಚಾಯ್ತಿಗೆ ಅಡಿಟಿಂಗ್ ಬಂದಿದ್ದ ವೇಳೆಯಲ್ಲಿ ಸಂತೋಷ್ ಆಕೆಯ ಕುತ್ತಿಗೆಗೆ ಚಾಕು ಇಟ್ಟು ನನ್ನನ್ನ ಪ್ರೀತಿಸದಿದ್ರೆ ನಿನ್ನನ್ನು ಕೊಂದು ನಾನು ಸಾಯುತ್ತೇನೆ ಎಂದು ಬೆದರಿಸಿದ್ದ.

ಈ ವೇಳೆಯಲ್ಲಿ ಯುವತಿಯ ಜೊತೆಯಲ್ಲಿದ್ದ ಆಕೆಯ ಗೆಳತಿಯರು ಅವನ ಕೈಗಳನ್ನ ಹಿಡಿದುಕೊಂಡು ಸ್ಥಳಿಯರನ್ನ ಕರೆದಿದ್ದಾರೆ. ಅಷ್ಟರಲ್ಲಿ ಅವರಿಂದ ತನ್ನ ಕೈಬಿಡಿಸಿಕೊಂಡು ಸಂತೋಷ್ ಮೂರು ಬಾರಿ ಕೈ ಕೊಯ್ದುಕೊಂಡಿದ್ದ. ಸ್ಥಳಕ್ಕೆ ಬಂದ ಸ್ಥಳಿಯರು ಆತನಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿ ಆ ಯುವಕನಿಂದ ಮುಚ್ಚಳಿಕೆ ಪತ್ರ ಬರೆಸಿಕೊಂಡು ಬುದ್ಧಿವಾದ ಹೇಳಿ ಆತನನ್ನ ವಾಪಸ್ ಕಳುಹಿಸಿದ್ದಾರೆ.

LEAVE A REPLY