ಮಂಗಳೂರು: ಈಗಾಗಲೇ ಸಾಕಷ್ಟು ಮಕ್ಕಳು ಹಾಗೂ ಯುವಕ ಯುವತಿಯರನ್ನ ಬಲಿಪಡೆದಿರುವ ಸೂಸೈಡ್ ಗೇಮ್ ಬ್ಲೂವೇಲ್ ಇದೀಗ ಮಂಗಳೂರಿಗೂ ಕಾಲಿಟ್ಟಿದೆ. ಬ್ಲೂವೇಲ್ ಗೇಮ್ ಆಡಿ 9ನೇ ತರಗತಿ ವಿದ್ಯಾರ್ಥಿಯೊಬ್ಬ ಕೈ ಕೊಯ್ದುಕೊಂಡಿದ್ದಾನೆ.
ಇದನ್ನೂ ಓದಿ: ಬ್ಲೂ ವೇಲ್ಗಾಗಿ ಭಾರತದಲ್ಲಿ ಮೊದಲ ಬಲಿ- ಬಾಲಕ ಪೋಸ್ಟ್ ಮಾಡಿದ ಕೊನೆಯ ಫೋಟೋ ಇದು
ತಿಮಿಂಗಿಲ ಆಕಾರದಲ್ಲಿ ಕೈ ಕೊಯ್ದುಕೊಂಡಿದ್ದು, ಹೆತ್ತವರು ವಿಚಾರಿಸಿದಾಗ ಬ್ಲೂವೇಲ್ ಗೇಮ್ ಆಟವಾಡಿದ್ದನ್ನು ಬಾಯ್ಬಿಟ್ಟಿದ್ದಾನೆ. ಬಾಲಕನಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.
ಇತ್ತೀಚೆಗಷ್ಟೇ ಹುಬ್ಬಳ್ಳಿಯಲ್ಲಿ ಶಾಲಾ ಬಾಲಕಿ ಕೈ ಕುಯ್ದುಕೊಂಡಿದ್ಲು. ಇದುವರೆಗೂ ದೇಶ, ವಿದೇಶಗಳಲ್ಲಿ ನೂರಾರು ಜನ ಬ್ಲೂವೆಲ್ ಗೇಮ್ನಿಂದ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಕೇಂದ್ರ ಸರ್ಕಾರ ಈಗಾಗಲೇ ಬ್ಲೂ ವೇಲ್ ಗೇಮ್ನ ಎಲ್ಲಾ ಲಿಂಕ್ಗಳನ್ನು ತೆಗೆದುಹಾಕಲು ಸೂಚಿಸಿದೆ.
ಇದನ್ನೂ ಓದಿ: ರಾಜ್ಯಕ್ಕೂ ಕಾಲಿಡ್ತು ಡೆಡ್ಲಿ ಬ್ಲೂವೇಲ್ ಗೇಮ್- ಗೇಮ್ಗಾಗಿ ಕೈ ಕುಯ್ದುಕೊಂಡ 11 ರ ಪೋರಿ
https://www.youtube.com/watch?v=NatlGJr24Go