ಅಶ್ಲೀಲ ಫೋಟೋ ವೀಕ್ಷಿಸಿದ ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಡ


– ಇಂದು ಕಾವೇರಲಿದೆ ಪ್ರತಿಭಟನೆ

ಬೆಂಗಳೂರು: ತನ್ವೀರ್ ಸೇಠ್ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ. ಮಕ್ಕಳು ಏನು ಓದಬೇಕು ಏನು ಓದಬಾರದು ಅನ್ನೋದನ್ನು ನಿರ್ಧರಿಸುವ ಇಲಾಖೆಯ ಜವಾಬ್ದಾರಿ ಹೊತ್ತವರು. ಆದರೆ ತಮ್ಮ ಜವಾಬ್ದಾರಿಯನ್ನೇ ಮರೆತ ಸಚಿವರು ನಿನ್ನೆ ರಾಯಚೂರಿನ ರಂಗಮಂದಿರದಲ್ಲಿ ನಡೆದ ಟಿಪ್ಪು ಜಯಂತಿ ಸಮಾರಂಭದಲ್ಲಿ ವೇದಿಕೆಯಲ್ಲೇ ಅಶ್ಲೀಲ ಫೋಟೋಗಳನ್ನು ನೋಡಿ ಸಿಕ್ಕಿಬಿದ್ದಿದ್ದರು. ಇದಾದ ಬೆನ್ನಲ್ಲೇ ಶಿಕ್ಷಣ ಸಚಿವ ತನ್ವೀರ್ ಸೇಠ್ ರಾಜೀನಾಮೆಗೆ ಒತ್ತಡ ಹೆಚ್ಚಾಗುತ್ತಿದೆ.

ಇಂದು ಬಿಜೆಪಿ ಮತ್ತು ವಿವಿಧ ಸಂಘಟನೆಗಳು ತನ್ವೀರ್ ಸೇಠ್ ವಿರುದ್ಧ ಬೀದಿಗಳಿಯಲು ನಿರ್ಧರಿಸಿವೆ. ಬಿಜೆಪಿ ಸರ್ಕಾರದ ಅವಧಿಯಲ್ಲಿ ವಿಧಾನಸಭೆಯಲ್ಲಿ ಅಶ್ಲೀಲ ವಿಡಿಯೋ ನೋಡಿದ್ದ ತೋರಿದ್ದ ಆರೋಪ ಹೊತ್ತು ಮೂವರು ಸಚಿವರು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಅದೇ ರೀತಿ ತನ್ವೀರ್ ಸೇಠ್ ಕೂಡಾ ರಾಜೀನಾಮೆ ನೀಡಬೇಕು ಎಂಬ ಒತ್ತಡ ತೀವ್ರಗೊಂಡಿದೆ.

rcr

ಇತ್ತ ಉಸ್ತುವಾರಿ ಸಚಿವರೂ ಆಗಿರುವ ತನ್ವೀರ್ ಸೇಠ್ ಇವತ್ತು ರಾಯಚೂರಿನಲ್ಲಿ ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಬೇಕಿತ್ತು. ಆದರೆ 9 ಗಂಡೆಯಾದ್ರೂ ಸಚಿವರು ನಿದ್ದೆಯಿಂದ ಮೇಲೇಳದ ಕಾರಣ ಕಾರ್ಯಕ್ರಮಗಳನ್ನು ಮುಂದೂಡಲಾಗಿದೆ. ಇಂದು ಬೆಳಗ್ಗೆ 9 ಗಂಟೆಗೆ ಯರಮರಸ್‍ನ ಸಕ್ರ್ಯೂಟ್ ಹೌಸ್‍ನಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಕುರಿತು ಸಭೆ ನಿಗದಿಯಾಗಿತ್ತು. ಬಳಿಕ 11 ಗಂಟೆಗೆ ಜಿಲ್ಲಾ ಪಂಚಾಯ್ತಿ ಸಭಾಂಗಣದಲ್ಲಿ ಜಿಲ್ಲಾ ಪ್ರಗತಿ ಪರಿಶೀಲನಾ ಸಭೆ ಇತ್ತು. ಈಗ ಈ ಎರಡು ಸಭೆಗಳನ್ನು ಮುಂದೂಡಲಾಗಿದೆ.

ಗುರುವಾರದಂದು ಪಬ್ಲಿಕ್ ಟಿವಿಯ ಬಿಗ್‍ಬುಲೆಟಿನ್‍ನಲ್ಲಿ ಮಾತಾಡಿದ ಸಚಿವ ತನ್ವೀರ್ ಸೇಠ್, ತಾವು ಅಶ್ಲೀಲ ಚಿತ್ರಗಳನ್ನು ನೋಡಿಲ್ಲ. ಮೈಸೂರಲ್ಲಿ ಟಿಪ್ಪು ಜಯಂತಿ ಹೇಗೆ ನಡೆಯುತ್ತಿದೆ ಅನ್ನೋದ್ರ ಬಗ್ಗೆ ಮಾಹಿತಿ ಪಡೆಯುತ್ತಿದೆಯಷ್ಟೇ ಎಂದು ತಮ್ಮನ್ನು ತಾವು ಸಮರ್ಥಿಸಿಕೊಂಡರು.

loading...

LEAVE A REPLY