Thursday, 22nd March 2018

`ಕೈ’ ಕಾರ್ಯಕರ್ತನ ಕೈ ಕಟ್ ಪ್ರಕರಣಕ್ಕೆ ಟ್ವಿಸ್ಟ್- ಹುಡುಗಿ ವಿಚಾರಕ್ಕೆ ಮಚ್ಚಿನಿಂದ ಅಟ್ಯಾಕ್

ಚಿಕ್ಕಬಳ್ಳಾಪುರ: ಶಾಸಕ ಡಾ ಕೆ ಸುಧಾಕರ್ ಪರವಾಗಿ ಮತದಾರರಿಗೆ ಸೀರೆ ಹಂಚುತ್ತಿದ್ದ ವಿಚಾರಕ್ಕೆ ಸಂಬಂಧಪಟ್ಟಂತೆ ನಡೆದ ಗಲಾಟೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತನ ಕೈಯನ್ನ ಜೆಡಿಎಸ್ ಕಾರ್ಯಕರ್ತನೊರ್ವ ಕತ್ತರಿಸಿದ ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ.

ಹುಡುಗಿ ವಿಚಾರಕ್ಕೆ ನಡೆದ ಗಲಾಟೆ ಎಂದು ಮಂಚೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೌರಿಬಿದನೂರು ತಾಲೂಕು ಅರ್ಕುಂದ ಗ್ರಾಮದಲ್ಲಿ ಕಾಂಗ್ರೆಸ್ ಕಾರ್ಯಕರ್ತ ರವಿಕುಮಾರ್ ಎಂಬವರ ಎಡಗೈಯನ್ನು ಜೆಡಿಎಸ್ ಕಾರ್ಯಕರ್ತ ಲೋಕೇಶ್ ಎಂಬಾತ ಮಚ್ಚಿನಿಂದ ಕೊಚ್ಚಿ ಕತ್ತರಿಸಿದ್ದಾನೆ.

ಲೋಕೇಶ್, ಅಪ್ರಾಪ್ತ ಬಾಲಕಿಯೊರ್ವಳನ್ನ ಮದುವೆಯಾಗಲು ಮುಂದಾಗಿದ್ದು, ಆದ್ರೆ ಅಪ್ರಾಪ್ತ ಬಾಲಕಿಯ ಜೊತೆಯಲ್ಲಿ ಲೊಕೇಶ್ ಮದುವೆಯಾಗುವುದನ್ನು ರವಿಕುಮಾರ್ ತಡೆದಿದ್ದಾರಂತೆ. ಅಪ್ರಾಪ್ತ ಬಾಲಕಿಯ ದೊಡ್ಡಪ್ಪ, ರವಿಕುಮಾರ್ ಮಾತು ಕೇಳಿ ಲೋಕೇಶ್ ಜೊತೆ ಮದುವೆ ಮಾಡಲು ನಿರಾಕರಿಸಿದ್ದರಂತೆ. ಹೀಗಾಗಿ ಅದೇ ದ್ವೇಷವನ್ನು ಮೈಗೂಡಿಸಿಕೊಂಡಿದ್ದ ಲೊಕೇಶ್, ಹಳೇ ದ್ವೇಷದ ಹಿನ್ನಲೆಯಲ್ಲಿ ಆ ಹುಡುಗಿ ವಿಚಾರಕ್ಕೆ ಸಂಬಧಿಸಿದಂತೆ ಮಾತಿನ ಚಕಮಕಿ ನಡೆದು ಗಲಾಟೆಯಲ್ಲಿ ಕೊಲೆ ಮಾಡಲು ಯತ್ನಿಸಿದ್ದಾನೆ ಎಂದು ದೂರು ನೀಡಲಾಗಿದೆ.

Leave a Reply

Your email address will not be published. Required fields are marked *