Thursday, 14th December 2017

Recent News

ಭುವನೇಶ್ವರ್ ಕುಮಾರ್ ಇನ್ ಲವ್: ಈ ನಟಿಯೊಂದಿಗೆ `ಡೇಟ್’ಗೆ ಬಂದಿದ್ರು !

ನವದೆಹಲಿ: ಕ್ರಿಕೆಟಿಗ ಭುವನೇಶ್ವರ್ ಕುಮಾರ್ ಪ್ರೇಮ ಪಾಶದಲ್ಲಿ ಸಿಲುಕಿದ್ದಾರೆ. ತಮ್ಮ ಇನ್‍ಸ್ಟಾಗ್ರಾಮ್ ನಲ್ಲಿ ಒಂದು ಫೋಟೋ ಅಪ್ಲೋಡ್ ಮಾಡಿದ್ದು, ನಾನು ಒಬ್ಬರೊಂದಿಗೆ ಡೇಟ್‍ನಲ್ಲಿದ್ದೇನೆ, ಫುಲ್ ಫೋಟೋ ಶೀಘ್ರವೇ ತೋರಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಈ ಫೋಟೋದಲ್ಲಿ ರೆಸ್ಟೋರೆಂಟ್ ಒಂದರಲ್ಲಿ ಭುವಿ ಜ್ಯೂಸ್ ಕುಡಿಯುವುದನ್ನು ಕಾಣಬಹುದು. ಆದರೆ ಫೋಟೋದಲ್ಲಿ ಅವರ ಗೆಳತಿ ಕಾಣುವುದಿಲ್ಲ. ಗೆಳತಿ ಫೋಟೋ ಇಲ್ಲದೇ ಇದ್ದರೂ ಆ ವ್ಯಕ್ತಿ ಯಾರೂ ಎನ್ನುವುದು ಗೊತ್ತಾಗಿದೆ. ಟಾಲಿವುಡ್‍ನ ನಟಿ ಅನುಸ್ಮೃತಿ ಸರ್ಕಾರ್ ಗೆಳತಿಯ ಜೊತೆ ಡೇಟ್‍ಗೆ ಬಂದಿರುವ ಫೋಟೋ ಒಂದು ಲೀಕ್ ಆಗಿದ್ದು, ಅದು ಈಗ ವೈರಲ್ ಆಗಿದೆ.

Dinner date 😊 full pic soon 😉

A post shared by Bhuvneshwar Kumar (@imbhuvi) on

ರೆಸ್ಟೋರೆಂಟ್ ಜನರು ಇಬ್ಬರ ಫೋಟೋಗಳನ್ನು ತೆಗೆಯುವಷ್ಟರಲ್ಲಿ ಕಾರಿನಲ್ಲಿ ಇಬ್ಬರು ಮರಳಿ ಹೋಗಿದ್ದಾರೆ. ಅನುಸ್ಮೃತಿ ಮುಂದಿನ ದಿನಗಳಲ್ಲಿ ಬಾಲಿವುಡ್ ಸಿನಿಮಾಗಳಲ್ಲಿ ನಟಿಸಲಿದ್ದಾರೆ. ಅನುಸ್ಮೃತಿ ಈಗಾಗಲೇ ತೆಲಗು, ಬಂಗಾಲಿ ಸಿನಿಮಾಗಳಲ್ಲಿ ನಟಿಸಿದ್ದಾರೆ. ಬೆಂಗಾಲಿಯ ಭೋರೆರ್ ಅಲೋ (2012) ಮತ್ತು ಮೋನರ್ ಮಜೇ ತುಮಿ (2013) ತೆರೆಕಂಡಿವೆ. 2016ರಲ್ಲಿ ತೆರೆಕಂಡ ತೆಲುಗಿನ ಸುಸ್ವಾಗತಂ ಸಿನಿಮಾದಲ್ಲಿ ನಟಿಸಿದ್ದರು.

ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ, ಭುವನೇಶ್ವರ್ ಕುಮಾರ್ ಇನ್‍ಸ್ಟಾಗ್ರಾಮ್ ನಲ್ಲಿ ತಾವು ಯುವತಿ ಜೊತೆ ಕಾರಿನಲ್ಲಿರುವ ಫೋಟೋ ಅಪ್ಲೋಡ್ ಮಾಡಿ, ಗಾಳಿ ಮಾತುಗಳನ್ನು ನಂಬಬೇಡಿ, ನೀವು ತಿಳಿದಿರುವ ಹುಡುಗಿ ನನ್ನ ಗರ್ಲ್ ಫ್ರೆಂಡ್ ಅಲ್ಲ. ಸೂಕ್ತ ಸಮಯ ಬಂದಾಗ ನಾನೇ ತಿಳಿಸುತ್ತೇನೆ ಎಂದು ಹೇಳಿದ್ದಾರೆ.

ಕ್ರಿಕೆಟಿಗರಾದ ಜಹೀರ್ ಖಾನ್, ವಿರಾಟ್ ಕೊಹ್ಲಿ ಬಾಲಿವುಡ್ ನಟಿಯರೊಂದಿಗೆ ಡೇಟ್‍ನಲ್ಲಿದ್ದಾರೆ. ಅಂತೆಯೇ ಹರ್ಭಜನ್ ಸಿಂಗ್ ಮತ್ತು ಯುವರಾಜ್ ಸಿಂಗ್ ನಟಿಯರೊಂದಿಗೆ ಮದುವೆಯಾಗಿದ್ದು, ಅವರ ಸಾಲಿಗೆ ಈಗ ಭುವನೇಶ್ವರ್ ಕುಮಾರ್ ಡೇಟಿಂಗ್ ಆರಂಭಿಸಿದ್ದಾರೆ.

 

Leave a Reply

Your email address will not be published. Required fields are marked *