18 ದಿನಗಳಿಂದ ಮಲಗಿದ್ದ ಸಿದ್ದನನ್ನು ಮೇಲೇಳಿಸುವಲ್ಲಿ ಸೇನಾಪಡೆ ಯಶಸ್ವಿ


ರಾಮನಗರ: ಕಳೆದ 18 ದಿನಗಳಿಂದ ರಾಮನಗರದ ಮಂಚನಬೆಲೆಯಲ್ಲಿ ಮಲಗಿದ್ದಲ್ಲೇ ಮಲಗಿದ್ದ ಕಾಡಾನೆ ಸಿದ್ದನನ್ನ ಮೇಲೇಳಿಸಲು ಸೇನಾಪಡೆ ಯಶಸ್ವಿಯಾಗಿದೆ.

ಸೈನಿಕರು ನಿರ್ಮಿಸಿರುವ ಗ್ಯಾಂಟ್ರಿ ಟವರ್ ಒಳಗೆ ಸಿದ್ದನನ್ನ ನಿಲ್ಲಿಸಲಾಗಿದೆ. ರಾತ್ರಿ ಟವರ್ ಒಳಗೆ ಹೋಗಲು ವಿರೋಧಿಸಿದ್ದ ಸಿದ್ದನನ್ನು ಬೆಳಿಗ್ಗಿನ ಜಾವ ಎರಡು ಕ್ರೇನ್ ಸಹಾಯದಿಂದ ಟವರ್ ಒಳಗೆ ನಿಲ್ಲಿಸಲಾಗಿದೆ. ಕಳೆದ ಮೂರು ದಿನಗಳಿಂದ ಮದ್ರಾಸ್ ಇಂಜಿನಿಯರ್ ಗ್ರೂಪ್ ಅಂಡ್ ಸೆಂಟರ್ ನ ಕರ್ನಲ್ ರವಿರಾಜನ್ ನೇತೃತ್ವದಲ್ಲಿ 50 ಸೈನಿಕರ ತಂಡ ಈ ಟವರ್ ನಿರ್ಮಿಸಿದ್ದಾರೆ.

vlcsnap-2016-11-11-10h57m06s222

vlcsnap-2016-11-11-10h56m47s31

ಸದ್ಯಕ್ಕೆ ಗ್ಯಾಂಟ್ರಿ ಟವರ್ ಒಳಗಿರುವ ಸಿದ್ಧನಿಗೆ ಚಿಕಿತ್ಸೆ ಮುಂದುವರೆದಿದ್ದು ಆಹಾರ ವ್ಯವಸ್ಥೆಯನ್ನೂ ಮಾಡಲಾಗಿದೆ. ಮಾಗಡಿಯ ಮಂಚನಬೆಲೆ ಸಮೀಪದ ಅವ್ವೇರಹಳ್ಳಿ ಬಳಿಯ ರಾಗಿಹೊಲದಲ್ಲಿ ಬಿದ್ದಿದ್ದ ಸಿದ್ದನನ್ನು ಮೇಲೆತ್ತಲು ಸೇನಾಪಡೆ, ಅರಣ್ಯಾ ಇಲಾಖೆ ಸಾಕಷ್ಟು ಶ್ರಮಪಡಬೇಕಾಯಿತು.

vlcsnap-2016-11-11-10h57m24s166

loading...

LEAVE A REPLY