Sunday, 17th December 2017

Recent News

ಉಪ್ಪಿ ಜೊತೆ ಆ್ಯಕ್ಟ್ ಮಾಡಲಿದ್ದಾಳೆ ಬೇಬಿ ಡಾಲ್ ಆದ್ಯಾ

ಬೆಂಗಳೂರು: ರಿಯಲ್ ಸ್ಟಾರ್ ಉಪೇಂದ್ರ ಅಭಿನಯದ `ಹೋಮ್ ಮಿನಿಸ್ಟರ್’ ಸಿನಿಮಾದಲ್ಲಿ ಕಿರುತೆರೆಯ ಬೇಬಿ ಡಾಲ್ ಆದ್ಯಾ ನಟಿಸಲಿದ್ದಾಳೆ ಎಂಬ ಸುದ್ದಿಯೊಂದು ಹೊರ ಬಿದ್ದಿದೆ.

ಖಾಸಗಿ ಚಾನೆಲ್ ಸಿಂಗಿಂಗ್ ರಿಯಾಲಿಟಿ ಶೋನಲ್ಲಿ ಕಾಣಿಸಿಕೊಂಡಿದ್ದ ಆದ್ಯಾಳಿಗೆ ಒಂದರ ಮೇಲೊಂದರಂತೆ ಒಳ್ಳೆಯ ಆಫರ್ ಗಳು ಬರುತ್ತಿವೆ. ಈಗಾಗಲೇ ರಕ್ಷಿತ್ ಶೆಟ್ಟಿ ನಿರ್ಮಾಣದ `ಭೀಮಸೇನಾ ನಳಮಹರಾಜ’ ಚಿತ್ರದಲ್ಲಿ ನಟಿಸುತ್ತಿದ್ದು, ಈಗ ಉಪೇಂದ್ರರೊಂದಿಗೆ ನಟಿಸುವ ಅವಕಾಶ ಸಿಕ್ಕಿದೆ.

ಹೋಮ್ ಮಿನಿಸ್ಟರ್ ಯಾವುದೇ ರಾಜಕೀಯ ವಿಷಯಕ್ಕೆ ಸಂಬಂಧಿಸಿದ ಸಿನಿಮಾವಲ್ಲ. ಚಿತ್ರದಲ್ಲಿ ಗಂಡನಿಗೆ ಪತ್ನಿಯೇ ಹೋಮ್ ಮಿನಿಸ್ಟರ್ ಆಗಿರುವ ಸುಂದರ ಕಥಾ ಹಂದರವುಳ್ಳ ಸಿನಿಮಾ ಇದಾಗಿದೆ.

ಕಿರುತೆರೆಯಲ್ಲಿ ತನ್ನ ಹಾಡು ಮತ್ತು ಮುದ್ದಾದ ನಗುವಿನ ಮೂಲಕ ಮೋಡಿ ಮಾಡಿದ್ದ ಆದ್ಯಾ ಹಿರಿತೆರೆಯಲ್ಲಿ ಈಗ ಮೋಡಿ ಮಾಡಲು ಬರುತ್ತಿದ್ದಾಳೆ.

 

Leave a Reply

Your email address will not be published. Required fields are marked *