ಕನ್ನಡಕ್ಕೆ ಬಾಹುಬಲಿ2 ಡಬ್ ಆಗಲಿ: ಟ್ವಿಟ್ಟರ್‍ನಲ್ಲಿ ಆಂದೋಲನ

ಬೆಂಗಳೂರು: ಬಾಹುಬಲಿ 2 ಕನ್ನಡಕ್ಕೆ ಡಬ್ ಆಗಬೇಕೆಂದು ಆಗ್ರಹಿಸಿ ಟ್ವಿಟ್ಟರ್‍ನಲ್ಲಿ ಕನ್ನಡಿಗರು ಆಗ್ರಹಿಸಿದ್ದಾರೆ.

ಕನ್ನಡ ಗ್ರಾಹಕ ವೇದಿಕೆಯವರು ಆಯೋಜಿಸಿದ ಈ ಅಭಿಯಾನಕ್ಕೆ ಜನ ಬೆಂಬಲ ವ್ಯಕ್ತಪಡಿಸುತ್ತಿದ್ದು,   ಹ್ಯಾಶ್ ಟ್ಯಾಗ್ ಬಳಸಿ ಟ್ವೀಟ್ ಮಾಡುತ್ತಿದ್ದಾರೆ. ಸಂಜೆ 6.30ಕ್ಕೆ ಆರಂಭವಾದ ಈ ಆಂದೋಲನ ಬೆಂಗಳೂರಿನಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿದೆ.

ರಾಜಮೌಳಿ ನಿರ್ದೇಶನದ ತೆಲುಗು, ತಮಿಳು, ಮಲೆಯಾಳಂ, ಹಿಂದಿ ಭಾಷೆಯಲ್ಲಿ ಮೂಡಿ ಬರಲಿರುವ ಬಾಹುಬಲಿ2 ಏಪ್ರಿಲ್ 28ರಂದು ಬಿಡುಗಡೆಯಾಗಲಿದೆ.

ಜನರ ಕೆಲ ಟ್ವೀಟ್ ಗಳನ್ನು ಇಲ್ಲಿ ನೀಡಲಾಗಿದೆ
– ಕನ್ನಡಿಗರು ಕರ್ನಾಟಕದಲ್ಲಿ ಕನ್ನಡ ಬಿಟ್ಟು ಬೇರೆ ಭಾಷೆಯಲ್ಲಿ ಬಾಹುಬಲಿ ಚಿತ್ರ ನೋಡುವುದು ಹೇಗೆ? ಕನ್ನಡದಲ್ಲೆ ಬಂದರೆ ನಮಗೆಲ್ಲರಿಗೂ ಸುಲಭವಾಗಿ ಅರ್ಥವಾಗುತ್ತದೆ.

– ಡಬ್ಬಿಂಗ್ ನಿಂದಾಗಿ ಇಂಡಸ್ಟ್ರಿ ಹಾಳಾಗುತ್ತದೆ ಎನ್ನುವುದಾದರೆ ತಮಿಳು, ತೆಲುಗು ಇಂಡಸ್ಟ್ರಿ ಇಷ್ಟರೊಳಗೆ ನೆಲಕಚ್ಚಬೇಕಿತ್ತು. ಹೀಗಾಗಿ ಕನ್ನಡಕ್ಕೆ ಡಬ್ಬಿಂಗ್ ಬೇಕು.

– ಕನ್ನಡ ನಾಡಿನಲ್ಲಿ ಮನರಂಜನೆ ಕನ್ನಡದಲ್ಲೇ ಸಿಗುವ ಹೆಜ್ಜೆಯಾಗಿ ಬಾಹುಬಲಿ ಕನ್ನಡಕ್ಕೆ ಡಬ್ ಆಗಿ ಬರಲಿ.

– ಇಡೀ ಕರ್ನಾಟಕ ಏನ್ ನೋಡಬೇಕು, ಏನ್ ನೋಡಬಾರದು ಎಂದು ನಿರ್ಧಾರ ಮಾಡಲು ಇವರು ಯಾರು?

– ಬಾಹುಬಲಿ ನಿರ್ದೇಶಕ ರಾಜಮೌಳಿ ಕನ್ನಡಿಗರು, ಸುದೀಪ್ ಅಸ್ಲಂ ಖಾನ್ ಪಾತ್ರ ಮಾಡಿದ್ದಾರೆ. ಅನುಷ್ಕಾ ಶೆಟ್ಟಿ ಮಂಗಳೂರಿನವರು. ಸಿನಿಮಾದ ಆಡಿಯೋ ಹಕ್ಕನ್ನು ಲಹರಿ ಸಂಸ್ಥೆ ಖರೀದಿಸಿದೆ. ಕನ್ನಡಿಗರೇ ಚಿತ್ರದಲ್ಲಿ ಕೆಲಸ ಮಾಡಿರುವಾಗ ಕನ್ನಡದಲ್ಲಿ ಬಾಹುಬಲಿ ಬಂದರೆ ಸಮಸ್ಯೆ ಏನು?

You might also like More from author

Leave A Reply

Your email address will not be published.

badge