Wednesday, 25th April 2018

Recent News

19 ದಿನದಲ್ಲಿ ಬಾಹುಬಲಿಯ ಬಾಕ್ಸ್ ಆಫೀಸ್ ಕಲೆಕ್ಷನ್ ಎಷ್ಟು ಕೋಟಿ ತಲುಪಿದೆ ಗೊತ್ತಾ?

ಚೆನ್ನೈ: ಭಾರತ ಬಾಕ್ಸ್ ಆಫೀಸ್ ಕಲೆಕ್ಷನ್ ನಲ್ಲಿ ಈಗ ಪ್ರತಿ ದಿನವೂ ದಾಖಲೆ ಬರೆಯುತ್ತಿರುವ ಬಾಹುಬಲಿ ಬಿಡುಗಡೆಯಾದ 19 ದಿನದಲ್ಲಿ ಒಟ್ಟು 1,450 ಕೋಟಿ ರೂ. ಕಲೆಕ್ಷನ್ ಮಾಡಿದೆ.

ಸಿನಿ ಮಾರುಕಟ್ಟೆ ವಿಶ್ಲೇಷಕ ರಮೇಶ್ ಬಲ ಟ್ವೀಟ್ ಮಾಡಿದ್ದು, ಭಾರತದಲ್ಲಿ 1,189 ಕೋಟಿ ರೂ. ಕಲೆಕ್ಷನ್ ಮಾಡಿದ್ದರೆ, ವಿದೇಶದಲ್ಲಿ ಒಟ್ಟು 261 ಕೋಟಿ ರೂ. ಕಲೆಕ್ಷನ್ ಮಾಡಿದೆ ಎಂದು ಹೇಳಿದ್ದಾರೆ.

ಹಿಂದಿಗೆ ಡಬ್ ಆಗಿರುವ ಬಾಹುಬಲಿ ಹತ್ತಿರ ಹತ್ತಿರ 500 ಕೋಟಿ ರೂ. ಕಲೆಕ್ಷನ್ ಮಾಡಿದೆ. ಬಾಹುಬಲಿ ಬಿಡುಗಡೆಯಾಗುವ ವೇಳೆ ಬಾಕ್ಸ್ ಆಫೀಸ್ ನಲ್ಲಿ 1500 ಕೋಟಿ ರೂ. ಕಲೆಕ್ಷನ್ ಮಾಡಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಈಗಲೂ ಬಾಕ್ಸ್ ಆಫೀಸ್ ಕಲೆಕ್ಷನ್ ನೋಡುತ್ತಿದ್ದರೆ 2ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡುವ ಸಾಧ್ಯತೆಯಿದೆ.

ಬಿಡುಗಡೆಯಾದ ಮೊದಲ ದಿನವೇ 217 ಕೋಟಿ ರೂ. ಕಲೆಕ್ಷನ್ ಮಾಡಿದ್ದ ಬಾಹುಬಲಿ 9ನೇ ದಿನದಲ್ಲಿ 1 ಸಾವಿರ ಕೋಟಿಗೂ ಅಧಿಕ ಕಲೆಕ್ಷನ್ ಮಾಡಿತ್ತು. ನಿರ್ಮಾಪಕ ಶೋಭಾ ಯರ್ಲಾಗಡ್ಡ ಅವರು ಬಾಹುಬಲಿ ಭಾಗ 1 ಮತ್ತು ಭಾಗ 2 ನಿರ್ಮಾಣಕ್ಕೆ ಒಟ್ಟು 450 ಕೋಟಿ ರೂ. ಖರ್ಚು ಮಾಡಿದ್ದರು. ಬಾಹುಬಲಿ ಭಾಗ 2015ರ ಜುಲೈ 10 ರಂದು ಬಿಡುಗಡೆಯಾದ ಬಾಹುಬಲಿ ದಿ ಬಿಗ್‍ನಿಂಗ್ ಬಾಕ್ಸ್ ಆಫೀಸ್ ನಲ್ಲಿ 650 ಕೋಟಿ ರೂ. ಕಲೆಕ್ಷನ್ ಮಾಡಿತ್ತು.

ಬಹುಬಲಿ ಯಾವ ದಿನ ಎಷ್ಟು ಕಲೆಕ್ಷನ್ ಆಗಿತ್ತು?
– ಮೊದಲ ದಿನ 217 ಕೋಟಿ ರೂ.
– ಎರಡನೇ ದಿನ 382.5 ಕೋಟಿ ರೂ.
– ಮೂರನೇ ದಿನ 540 ಕೋಟಿ ರೂ.
– ನಾಲ್ಕನೇಯ ದಿನ 625 ಕೋಟಿ ರೂ.
– ಐದನೇಯ ದಿನ 710 ಕೋಟಿ ರೂ.
– ಆರನೇ ದಿನ 778 ಕೋಟಿ ರೂ.
– ಏಳನೇ ದಿನ 860 ಕೋಟಿ ರೂ.
– ಎಂಟನೇ ದಿನ 915 ಕೋಟಿ ರೂ

ಬಾಹುಬಲಿ ದಾಖಲೆಗಳು
– ತೆಲುಗು, ತಮಿಳು, ಹಿಂದಿಯಲ್ಲಿ ಅತಿ ಹೆಚ್ಚು ಕಲೆಕ್ಷನ್ ಆದ ಮೊದಲ ಸಿನಿಮಾ
– ಬಿಡುಗಡೆಯಾದ ಒಂದೇ ದಿನದಲ್ಲಿ 100 ಕೋಟಿ ಕಲೆಕ್ಷನ್ ಆದ ಮೊದಲ ಭಾರತೀಯ ಸಿನಿಮಾ
– ವಿಶ್ವದ ಮಾರುಕಟ್ಟೆಯಲ್ಲಿ ಅತಿ ಹೆಚ್ಚು ಹಣ ಕಲೆಕ್ಷನ್ ಆದ ಮೊದಲ ಭಾರತೀಯ ಸಿನಿಮಾ
– ಒಟ್ಟು 9 ಸಾವಿರಕ್ಕೂ ಅಧಿಕ ಸ್ಕ್ರೀನ್‍ಗಳಲ್ಲಿ ಬಿಡುಗಡೆಯಾದ ಮೊದಲ ಭಾರತೀಯ ಸಿನಿಮಾ

ಇದನ್ನೂ ಓದಿ: ಕನ್ನಡ ಸಿನಿಮಾಗಳಲ್ಲಿ ನಟಿಸುತ್ತೀರಾ? ಅಭಿಮಾನಿಯ ಪ್ರಶ್ನೆಗೆ ಅನುಷ್ಕಾ ಶೆಟ್ಟಿ ಕನ್ನಡದಲ್ಲಿ ಉತ್ತರಿಸಿದ್ದು ಹೀಗೆ

ಇದನ್ನೂ ಓದಿ: ಭಾರತೀಯ ಚಿತ್ರರಂಗದಲ್ಲಿ ಒಂದೇ ದಿನ 10 ದಾಖಲೆಗಳನ್ನು ಬರೆದ ಬಾಹುಬಲಿ-2: ಇಲ್ಲಿದೆ ಪೂರ್ಣ ಪಟ್ಟಿ

ಇದನ್ನೂ ಓದಿ:30 ಕೋಟಿ ಕೊಟ್ರೆ ಪ್ರಭಾಸ್ ಕಾಲ್‍ಶೀಟ್: ಸಲ್ಮಾನ್, ಅಮೀರ್, ಅಕ್ಷಯ್ ಕುಮಾರ್‍ಗೆ ಎಷ್ಟು?

Leave a Reply

Your email address will not be published. Required fields are marked *