ಆರೋಪಿಯೂ ಇವರೇ, ವಿಚಾರಣಾಧಿಕಾರಿಯೂ ಇವರೇ- 8 ಕೇಸ್‍ಗಳಲ್ಲಿ 2 ಕೇಸ್ ಖುಲಾಸೆ

ಬೆಂಗಳೂರು: ತಪ್ಪು ಮಾಡಿದವರು ಆರೋಪಿ ಸ್ಥಾನದಲ್ಲಿದ್ರೆ, ವಿಚಾರಣೆ ಮಾಡಬೇಕಿದ್ದವರು ನ್ಯಾಯಪಾಲಕರ ಸ್ಥಾನದಲ್ಲಿ ಇರ್ತಾರೆ. ಆದ್ರೆ ಇಲ್ಲಿ ಎಲ್ಲವೂ ಉಲ್ಟಾ. ಇವರ ವಿರುದ್ಧ ಲೋಕಾಯುಕ್ತದಲ್ಲಿ 8 ಕೇಸ್ ದಾಖಲಾಗಿದ್ದು ವಿಚಾರಣೆ ಮಾಡೋದು ಕೂಡ ಇವರೇ.

ಹೌದು. ಪ್ರಸ್ತುತ ಲೋಕಾಯುಕ್ತದಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆಗಿರೋ ನಾಗೇಶ್ ರೆಡ್ಡಿ ಈ ಹಿಂದೆ ರಾಜಾಜಿನಗರದ ಬಿಬಿಎಂಪಿ ಕಚೇರಿಯಲ್ಲಿ ಅಸಿಸ್ಟೆಂಟ್ ಎಕ್ಸಿಕ್ಯೂಟೀವ್ ಎಂಜಿನಿಯರ್ ಆಗಿ ಕಾರ್ಯ ನಿರ್ವಹಿಸುತ್ತಿದ್ರು. ಈ ವೇಳೆ ಸಾಕಷ್ಟು ಅವ್ಯವಹಾರ ಮಾಡಿರೋ ಆರೋಪದ ಮೇಲೆ ನಾಗೇಶ್ ವಿರುದ್ಧ ಲೋಕಾಯುಕ್ತದಲ್ಲೇ 8 ದೂರುಗಳಿವೆ. ವಿಪರ್ಯಾಸ ಅಂದ್ರೆ ನಾಗೇಶ್ ರೆಡ್ಡಿ ಈಗ ಲೋಕಾಯುಕ್ತ ಸಂಸ್ಥೆಯಲ್ಲೇ ಸಹಾಯಕ ಎಂಜಿನಿಯರ್ ಆಗಿದ್ದಾರೆ. ತನ್ನ ಮೇಲಿನ ಕೇಸನ್ನ ತಾನೇ ವಿಚಾರಣೆ ಮಾಡಿ 2 ಕೇಸ್‍ಗಳನ್ನು ಖುಲಾಸೆಗೊಳಿಸಿದ್ದಾರೆ.

ನಾಗೇಶ್ ರೆಡ್ಡಿ ವಿರುದ್ಧ ಲೋಕಾಯುಕ್ತ ರಿಜಿಸ್ಟಾರ್, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ 9 ಪತ್ರಗಳನ್ನ ಬರೆದಿದ್ದಾರೆ. ಇವರ ಸೇವೆ ನಮಗೆ ಅಗತ್ಯವಿಲ್ಲ. ನಾಗೇಶ್ ರೆಡ್ಡಿಯನ್ನ ಸೇವೆಯಿಂದ ಹಿಂಪಡೆಯಬೇಕು ಅಂತ ಮನವಿ ಮಾಡಿದ್ದಾರೆ. ಆದ್ರೆ ಸರ್ಕಾರ ಮಾತ್ರ ಇದುವರೆಗೆ ಯಾವುದೇ ಕ್ರಮ ಕೈಗೊಂಡಿಲ್ಲ ಅಂತಾ ಆರ್‍ಟಿಐ ಕಾರ್ಯಕರ್ತ ಭಾಸ್ಕರ್ ಆರೋಪಿಸಿದ್ದಾರೆ.

You might also like More from author

Leave A Reply

Your email address will not be published.

badge