Sunday, 22nd April 2018

ಮಂಗಳೂರಿನಲ್ಲಿ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಹತ್ಯೆಗೆ ಸಂಚು?

ಮಂಗಳೂರು: ಬುಧವಾರ ನಗರದಲ್ಲಿ ವಿಚಾರವಾದಿ ಪ್ರೊಫೆಸರ್ ನರೇಂದ್ರ ನಾಯಕ್ ಅವರ ಕೊಲೆಗೆ ಯತ್ನ ನಡೆದಿದೆ.

ಬೆಳಗ್ಗೆ 6 ಗಂಟೆಯ ವೇಳೆ ಲೇಡಿಹಿಲ್ ಬಳಿ ಕಾರಿನಲ್ಲಿ ನರೇಂದ್ರನಾಯಕ್ ತೆರಳುತ್ತಿದ್ದ ಸಂದರ್ಭ ಬೈಕ್‍ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ನಿಮ್ಮ ಕಾರಿನ ಟಯರ್ ಪಂಚರ್ ಆಗಿದೆ ಕಾರು ನಿಲ್ಲಿಸಿ ಎಂದಿದ್ದರು. ಆದರೆ ತಕ್ಷಣಕ್ಕೆ ಎಚ್ಚೆತ್ತುಕೊಂಡ ನರೇಂದ್ರ ನಾಯಕ್ ಕಾರಿನ ವೇಗವನ್ನು ಜಾಸ್ತಿ ಮಾಡಿ ದುಷ್ಕರ್ಮಿಗಳಿಂದ ತಪ್ಪಿಸಿಕೊಂಡಿದ್ದಾರೆ.

ನರೇಶ್ ಶೆಣೈ ಮೇಲೆ ಆರೋಪ: ಮಂಗಳೂರಿನಲ್ಲಿ ಕೊಡಿಯಾಲ್‍ಬೈಲ್‍ನಲ್ಲಿ ಕಳೆದ ಮಾರ್ಚ್ 21 ರಂದು ಆರ್‍ಟಿಐ ಕಾರ್ಯಕರ್ತ ವಿನಾಯಕ್ ಬಾಳಿಗರನ್ನು ಬರ್ಬರವಾಗಿ ಕಡಿದು ಹತ್ಯೆ ನಡೆಸಲಾಗಿತ್ತು. ನಮೋ ಬ್ರಿಗೇಡ್ ಸಂಸ್ಥಾಪಕ ನರೇಶ್ ಶೆಣೈ ಈ ಹತ್ಯೆಯನ್ನು ಮಾಡಿಸಿದ್ದು ಆರೋಪಿಸಿ ಬಾಳಿಗ ಕುಟುಂಬದ ಪರವಾಗಿ ಪ್ರೊ.ನರೇಂದ್ರ ನಾಯಕ್ ಹೋರಾಟಗಳನ್ನು ನಡೆಸಿದ್ದರು. ಈ ಪ್ರಕರಣದಲ್ಲಿ ಜೈಲು ಸೇರಿ ಈಗ ಜಾಮೀನಿನ ಮೇಲೆ ಹೊರ ಬಂದಿರುವ ನರೇಶ್ ಶೆಣೈ ತನ್ನ ಸಹಚರ ಶಿವ ಎಂಬಾತನಿಂದ ತನ್ನ ಹತ್ಯೆಗೆ ಸಂಚು ರೂಪಿಸಿದ್ದಾನೆಂದು ನರೇಂದ್ರ ನಾಯಕ್ ಈಗ ಮಂಗಳೂರಿನ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಕೊಲೆ ಬೆದರಿಕೆಯ ಪೊಲೀಸ್ ಇಲಾಖೆಯಿಂದ ಗನ್‍ಮ್ಯಾನ್ ಇದೆಯಾದರೂ ನಿನ್ನೆ ಗನ್‍ಮ್ಯಾನ್ ಇಲ್ಲದೇ ನಾನೊಬ್ಬನೇ ಕಾರಿನಲ್ಲಿ ಸಂಚರಿಸುತ್ತಿದ್ದೆ.ಇದನ್ನೇ ಗುರಿಯಾಗಿಸಿ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ನರೇಂದ್ರ ನಾಯಕ್ ಆರೋಪಿಸಿದ್ದಾರೆ.

ಮಾರ್ಚ್ 21ಕ್ಕೆ ವಿನಾಯಕ್ ಬಾಳಿಗಾ ಹತ್ಯೆಯಾಗಿ ಒಂದು ವರ್ಷವಾಗಲಿದ್ದು ನಾವು ಕಾರ್ಯಕ್ರಮವೊಂದನ್ನು ಆಯೋಜಿಸಿದ್ದೇವೆ. ಈ ಸಂಬಂಧ ಬಾಳಿಗಾ ಹತ್ಯೆಯಾಗಿ ಒಂದು ವರ್ಷದ ಒಳಗಡೆ ನನ್ನನ್ನು ಹತ್ಯೆ ನಡೆಸಲು ದುಷ್ಕರ್ಮಿಗಳು ಮುಂದಾಗಿದ್ದರು ಎಂದು ಅವರು ಆರೋಪಿಸಿದ್ದಾರೆ. ಪ್ರಕರಣ ಈಗ ಸಿಸಿಬಿ ಪೊಲೀಸರಿಗೆ ವರ್ಗಾವಣೆಯಾಗಿದೆ.

Leave a Reply

Your email address will not be published. Required fields are marked *