Monday, 28th May 2018

ಹಾರ್ದಿಕ್ & ಪರಿಣೀತಿ ಚೋಪ್ರಾ ನಡುವೆ ಕುಚ್..ಕುಚ್..! ಇಲ್ಲಿದೆ ಸಾಕ್ಷಿ

ಮುಂಬೈ: ಬಾಲಿವುಡ್ ನಟಿ ಪರಿಣೀತಿ ಚೋಪ್ರಾ ಮತ್ತು ಕ್ರಿಕೆಟಿದ ಹಾರ್ದಿಕ್ ಪಾಂಡ್ಯ ಇಬ್ಬರೂ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಒಳಗಾಗಿದ್ದಾರೆ.

ಹೌದು, ನಟಿ ಪರಿಣೀತಿ ತಮ್ಮ ಟ್ವಿಟರ್ ಅಕೌಂಟ್ ನಲ್ಲಿ ಸೈಕಲ್ ಫೋಟೋ ಹಾಕಿ, ಒಳ್ಳೆಯ ಪಾರ್ಟ್ ನರ್ ನೊಂದಿಗೆ ಸುಂದರವಾದ ಟ್ರಿಪ್.. ಗಾಳಿಯಲ್ಲಿ ಪ್ರೀತಿ ತೇಲಾಡುತ್ತಿದೆ ಎಂದು ಬರೆದುಕೊಂಡು ಮೂರು ರೆಡ್ ಹಾರ್ಟ್ ಎಮೋಜಿಗಳನ್ನು ಬಳಸಿ ಟ್ವೀಟ್ ಮಾಡಿದ್ದಾರೆ.

ಶ್ರೀಲಂಕಾ ವಿರುದ್ಧದ ಕ್ರಿಕೆಟ್ ಪಂದ್ಯಗಳಲ್ಲಿ ಬ್ಯೂಸಿಯಾಗಿರುವ ಹಾರ್ದಿಕ್ ಪಾಂಡ್ಯ ಈ ಟ್ವೀಟ್ ಗೆ, ನನ್ನ ಊಹೆಯ ಪ್ರಕಾರ, ಇದು ಎರಡನೇ ಬಾಲಿವುಡ್ ಮತ್ತು ಕ್ರಿಕೆಟ್ ಲಿಂಕ್ ಇದ್ದೀರ ಬಹುದು ಎಂದು ಬರೆದು ಟ್ವೀಟ್ ಮಾಡಿದ್ದಾರೆ.

ಕೂಡಲೇ ಪ್ರತಿಕ್ರಿಯಿಸಿರುವ ಪರಿಣೀತಿ, ಹ್ಹ..ಹ್ಹ..ಹ್ಹ.. ಇದ್ದರೂ ಇರಬಹುದು ಅಥವಾ ಇರದಿರಲೂಬಹುದು..ಈ ಫೋಟೋ ಮಾತ್ರ ಅದರ ಸುಳಿವನ್ನು ನೀಡಬಲ್ಲದು ಎಂದು ಮಾತ್ರ ಹೇಳಬಲ್ಲೆ ಎಂದು ಉತ್ತರಿಸಿದ್ದಾರೆ.

ಪರಿಣೀತಿ ಮತ್ತು ಹಾರ್ದಿಕ್ ಪಾಂಡ್ಯರ ಟ್ವೀಟ್ ಗಳನ್ನು ನೋಡಿದ ಅಭಿಮಾನಿಗಳು ಸಹ ಸಖತ್ ರಿಪ್ಲೇ ನೀಡಿದ್ದಾರೆ. ಕೆಲವರು ಕ್ಯೂಟ್ ಕ್ಯೂಟ್ ರಿಪ್ಲೇ ನೀಡಿದ್ರೆ, ಇನ್ನೂ ಕೆಲವರು ಮ್ಯಾಚ್ ಬಗ್ಗೆ ಗಮನ ನೀಡಿ ಎಂದು ಹಾರ್ದಿಕ್ ಗೆ ಸಲಹೆ ನೀಡಿದ್ದಾರೆ. ಇನ್ನೂ ಹಾರ್ದಿಕ್ ಪಾಂಡೆ ಹೆಸರು ಮಲಯಾಳಂ ಮೂಲದ ನಟಿ ಪಾರ್ವತಿ ನಾಯರ್ ಜೊತೆಯಲ್ಲೂ ಈ ಹಿಂದೆ ಕೇಳಿ ಬಂದಿತ್ತು.

ಇದನ್ನೂ ಓದಿ: ಒಂದೇ ಓವರ್ ನಲ್ಲಿ ಸಿಕ್ಸರ್, ಬೌಂಡರಿ ಚಚ್ಚಿ ಕಪಿಲ್ ದೇವ್ ದಾಖಲೆ ಮುರಿದ ಪಾಂಡ್ಯ

Leave a Reply

Your email address will not be published. Required fields are marked *