Wednesday, 23rd May 2018

Recent News

ಪ್ರಭಾಸ್ ಜೊತೆಗಿನ ಮದ್ವೆ ಸಂಬಂಧದ ಬಗ್ಗೆ ಮೌನ ಮುರಿದ ಸ್ವೀಟಿ

ಚೆನ್ನೈ: ಸೌಥ್ ಸಿನಿ ಇಂಡಸ್ಟ್ರಿಯ ಪ್ರಸಿದ್ಧ ಜೋಡಿ, ಕ್ಯೂಟ್ ಹೀರೋ-ಹೀರೋಯಿನ್ ಅನುಷ್ಕಾ ಶೆಟ್ಟಿ ಹಾಗೂ ಪ್ರಭಾಸ್ ಯಾವಾಗಲು ಒಂದಲ್ಲಾ ಒಂದು ವಿಷಯಕ್ಕೆ ಸುದ್ದಿ ಆಗುತ್ತಿರುತ್ತಾರೆ. ದೇಶಾದ್ಯಂತ ಹವಾ ಸೃಷ್ಟಿಸಿದ್ದ `ಬಾಹುಬಲಿ’ ಚಿತ್ರದ ಬಳಿಕ ನಾಯಕ ನಟ ಪ್ರಭಾಸ್ ಹಾಗೂ ಅನುಷ್ಕಾ ನಡುವಿನ ಬಾಂಧವ್ಯದ ಬಗ್ಗೆ ಸಾಕಷ್ಟು ಬಾರಿ ಸುದ್ದಿಯಾಗಿದೆ.

ಬಾಹುಬಲಿ ಸಿರೀಸ್ ಚಿತ್ರದ ಬಳಿಕ ಅನುಷ್ಕಾ ಅಭಿನಯಿಸುತ್ತಿರುವ ಚಿತ್ರ ಭಾಗಮತಿಯಾಗಿದ್ದು, ಜಿ. ಅಶೋಕ್ ನಿರ್ದೇಶನದಲ್ಲಿ ಚಿತ್ರ ಮೂಡಿಬಂದಿದೆ. ಭಾಗಮತಿ ಚಿತ್ರದಲ್ಲಿ ಅನುಷ್ಕಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಈ ಸಿನಿಮಾ ಒಂದು ಮಹಿಳಾ ಪ್ರಧಾನ ಕಥೆಯ ಚಿತ್ರವಾಗಿದ್ದು, ಥ್ರಿಲ್ಲರ್ ಹಾರರ್ ಹೂರಣವಿದೆ. ವಂಶಿ ಕೃಷ್ಣರೆಡ್ಡಿ ನಿರ್ಮಿಸಿರುವ ಈ ಚಿತ್ರದಲ್ಲಿ ಅನುಷ್ಕಾ ವಿಭಿನ್ನ ಶೇಡ್‍ಗಳಲ್ಲಿ ಕಂಗೊಳಿಸಿದ್ದಾರೆ.

ತಮಿಳುನಾಡಿನಲ್ಲಿ ತಮ್ಮ ಭಾಗಮತಿ ಚಿತ್ರದ ಧ್ವನಿಸುರಳಿ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಭಾಸ್ ನನ್ನ ಅತ್ಯುತ್ತಮ ಸ್ನೇಹಿತ. ಪ್ರಭಾಸ್ ತಮ್ಮ ನಡುವೆ ಇರುವ ಪ್ರೀತಿ, ಪ್ರೇಮ, ಮದುವೆ ಎಂದು ಹೇಳುತ್ತಿರುವ ಗಾಳಿ ಸುದ್ದಿಯೆಲ್ಲಾ ಸುಳ್ಳು ಎಂದು ಹೇಳಿ ತಳ್ಳಿ ಹಾಕಿದ್ದಾರೆ. ಐಪಿಎಸ್ ಪಾತ್ರಧಾರಿಯಾದ ಚಂಚಲ ಭಾಗಮತಿಯಾಗಿ ಹೇಗೆ ಬದಲಾಗುತ್ತಾರೆ ಎಂಬುದು ಚಿತ್ರದ ಕಥೆಯಾಗಿದೆ ಎಂದರು. ಇದೇ ವೇಳೆ ನಿರ್ದೇಶಕ ಪೂರಿ ಜಗನಾಥ್ ನನ್ನ ಗುರು. ಅವರಿಂದ ಬಹಳ ಕಲಿತಿದ್ದೇನೆ. ನಿರ್ದೇಶಕ ರಾಜಮೌಳಿ ಚಿತ್ರದಲ್ಲಿ ಮತ್ತೆ ಅಭಿನಯಿಸುವ ಬಯಕೆ ಇದೆ” ಅಂತಾ ಹೇಳಿದ್ದಾರೆ.

ಭಾಗಮತಿ ಸಿನಿಮಾ ಟ್ರೇಲರ್ ಜನವರಿ 8 ರಂದು ಬಿಡುಗಡೆಯಾಗಿದ್ದು, ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ ಲಕ್ಷಾಂತರ ವೀವ್ಸ್ ಆಗಿ ಯೂ ಟ್ಯೂಬ್ ನಲ್ಲಿ ಟ್ರೆಂಡಿಂಗ್ ಟಾಪಿಕ್ ಆಗಿತ್ತು. ಸಿನಿಮಾದ ಮೊದಲಾರ್ಧದಲ್ಲಿ ಅನುಷ್ಕಾ ರೊಮ್ಯಾಂಟಿಕ್ ಆಗಿ ಕಾಣಿಸಿಕೊಂಡಿದ್ದಾರೆ. ಅನುಷ್ಕಾಗೆ ನಾಯಕನಾಗಿ ಉನ್ನಿ ಮುಕುಂದನ್ ಅಭಿನಯಿಸಿದ್ದಾರೆ. ಉಳಿರ್ಧದಲ್ಲಿ ಸಸ್ಪೆನ್ಸ್ ಮತ್ತು ಹಾರರ್ ಇದ್ದು, ಅನುಷ್ಕಾ ಅಭಿನಯದ ಅರುಂಧತಿ ಸಿನಿಮಾದ ಛಾಯೆಯನ್ನು ಈ ಸಿನಿಮಾದಲ್ಲಿ ಕಾಣಬಹುದಾಗಿದೆ.

ಭಾಗಮತಿ ಚಿತ್ರದಲ್ಲಿ ಅನುಷ್ಕಾ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಇನ್ನುಳಿದಂತೆ ಆಶಾ ಶರತ್, ಉನ್ನಿ ಮುಕುಂದನ್ ಮುಂತಾದವರು ಅಭಿನಯಿಸಿದ್ದಾರೆ. `ಬಾಹುಬಲಿ’ ಚಿತ್ರದಲ್ಲಿ ದೇವಸೇನಾ ಆಗಿ ಕಾಣಿಸಿಕೊಂಡಿದ್ದ ಅನುಷ್ಕಾ, ಈಗ ರಾಣಿ ಭಾಗಮತಿ ಪಾತ್ರದಲ್ಲಿ ಮಿಂಚಲಿದ್ದಾರೆ. ಚಿತ್ರ ತೆಲುಗು ಮತ್ತು ತಮಿಳು ಭಾಷೆಯಲ್ಲಿ ಏಕಕಾಲದಲ್ಲಿ ರಿಲೀಸ್ ಆಗುತ್ತೆ. ಭಾಗಮತಿ ಸಿನಿಮಾ ಇದೇ 26 ರಂದು ಬಿಡುಗಡೆಯಾಗಲಿದೆ. ಇದನ್ನು ಓದಿ: ಫೇಸ್‍ಬುಕ್ ಪೋಸ್ಟ್ ಹಾಕಿ ಗುಡ್ ಲಕ್ ಸ್ವೀಟಿ ಎಂದ ಪ್ರಭಾಸ್

Leave a Reply

Your email address will not be published. Required fields are marked *