Friday, 22nd June 2018

Recent News

ಓದಿದ್ದು 3ನೇ ಕ್ಲಾಸ್, ಮೆಕ್ಯಾನಿಕ್ ಕೆಲ್ಸ- ಆದ್ರೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶಕ್ಕೆ ಖ್ಯಾತಿ ತಂದ್ರು ಹಾಸನದ ಅಕ್ಮಲ್ ಪಾಶಾ

ಹಾಸನ: ಇವರು ಓದಿದ್ದು 3ನೇ ಕ್ಲಾಸ್, ಮಾಡ್ತಿರೋದು ಮೆಕ್ಯಾನಿಕ್ ಕೆಲ್ಸ. ಆದ್ರೂ ಅಂತರಾಷ್ಟ್ರೀಯ ಮಟ್ಟದಲ್ಲಿ ದೇಶದ ಕೀರ್ತಿ ಪತಾಕೆಯನ್ನ ಹಾರಿಸುತ್ತಿದ್ದಾರೆ. ಅದೂ ತಮ್ಮ ಹುರಿಗೊಳಿಸಿದ ದೇಹದ ಮೂಲಕ. ಹಾಸನದ ಅಕ್ಮಲ್ ಪಾಶಾ ನಮ್ಮ ಇಂದಿನ ಪಬ್ಲಿಕ್ ಹೀರೋ.

ಹಾಸನದ ಹುಣಸಿನಕೆರೆ ಬಡಾವಣೆ ನಿವಾಸಿಯಾಗಿರೋ ಪಾಶಾ ಅವರು ಬಾಡಿಬಿಲ್ಡರ್ ಆಗಿದ್ದಾರೆ. ಮೂರನೇ ಕ್ಲಾಸ್‍ವರೆಗೆ ಓದಿರೋ ಇವರು, ಬಡತನದಿಂದಾಗಿ ಅರ್ಧಕ್ಕೇ ವಿದ್ಯಾಭ್ಯಾಸವನ್ನ ಮೊಟಕುಗೊಳಿಸಿ ಹಾಸನದ ನಗರದ ಆಜಾದ್ ರಸ್ತೆಯ ವರ್ಕ್‍ಶಾಪ್ ನಲ್ಲಿ ಕೆಲಸಕ್ಕೆ ಸೇರಿಕೊಂಡವರು.

ಆದ್ರೆ ಜೀವನದಲ್ಲಿ ಏನಾದ್ರೂ ಸಾಧಿಸಬೇಕು ಅಂದಾಗ ಹೊಳೆದಿದ್ದೇ ಈ ದೇಹ ಹುರಿಗಟ್ಟಿಸೋ ದಾರಿ. ಕಳೆದ 10 ವರ್ಷಗಳಿಂದ ಜಿಮ್ ನಲ್ಲಿ ವರ್ಕೌಟ್ ಮಾಡ್ತಿರೋ ಅಕ್ಮಲ್ ಹಲವು ಸ್ಪರ್ಧೆಗಳಲ್ಲಿ ಪ್ರಶಸ್ತಿ ಗಳಿಸಿದ್ದಾರೆ. ಈಗ ದೇಶದ ಪ್ರಮುಖ ಬಾಡಿ ಬಿಲ್ಡರ್‍ಗಳಲ್ಲಿ ಒಬ್ಬರಾಗಿದ್ದಾರೆ.

ಸತತ 15 ವರ್ಷಗಳಿಂದ ಮೆಕ್ಯಾನಿಕ್ ಆಗಿರೋ ಅಕ್ಮಲ್ ಕೆಲವೊಮ್ಮೆ ಅಗತ್ಯ ಊಟ ಸಿಗದಿದ್ದಾಗ ಸೊಪ್ಪು ತರಕಾರಿಯಲ್ಲೇ ಬಾಡಿ ಮೆಂಟೇನ್ ಮಾಡ್ತಿದ್ದಾರೆ. ಮಿಸ್ಟರ್ ಹಾಸನದಿಂದ ಆರಂಭವಾದ ಅಕ್ಮಲ್ ಬಾಡಿಬಿಲ್ಡಿಂಗ್ ಕಾಂಪಿಟೇಷನ್ 10 ಬಾರಿ ಮಿಸ್ಟರ್ ಕರ್ನಾಟಕ, ಮಿಸ್ಟರ್ ಇಂಡಿಯಾ, ಮಿಸ್ಟರ್ ಏಷ್ಯಾದವರೆಗೆ ಸಾಗಿದೆ. ಜೂನ್ ತಿಂಗಳಿನಲ್ಲಿ ಫಿಲಿಪ್ಪೈನ್ಸ್‍ನಲ್ಲಿ ನಡೆಯಲಿರೋ ಮಿಸ್ಟರ್ ವರ್ಲ್ಡ್  ಸ್ಪರ್ಧೆಗೆ ಈಗ ದೇಹವನ್ನ ಹುರಿಗಟ್ಟಿಸುತ್ತಿದ್ದಾರೆ.

Leave a Reply

Your email address will not be published. Required fields are marked *