Tuesday, 20th March 2018

Recent News

15 ವರ್ಷಗಳ ಬಳಿಕ ಮಾಲವಿ ಜಲಾಶಯಕ್ಕೆ ಹರಿದುಬಂತು 9 ಅಡಿ ನೀರು

ಬಳ್ಳಾರಿ: ಭಾನುವಾರ ರಾತ್ರಿ ಸುರಿದ ಭಾರೀ ಮಳೆಗೆ 15 ವರ್ಷಗಳ ಬಳಿಕ ಹಗರಿಬೊಮ್ಮನಹಳ್ಳಿಯ ಮಾಲವಿ ಜಲಾಶಯಕ್ಕೆ 9 ಅಡಿಯಷ್ಟು ನೀರು ಹರಿದುಬಂದಿದೆ.

ನಿನ್ನೆ ರಾತ್ರಿ ಹಗರಿಬೊಮ್ಮನಹಳ್ಳಿ ತಾಲೂಕಿನಾದ್ಯಂತ ಉತ್ತಮ ಮಳೆಯಾಗಿದೆ. 32 ಅಡಿ ಸಾಮಥ್ರ್ಯದ ಮಾಲವಿ ಜಲಾಶಯಕ್ಕೆ ತುಂಗಭದ್ರಾ ಡ್ಯಾಂನಿಂದ 2 ಟಿಎಂಸಿ ನೀರು ಹರಿಸಬೇಕೆಂದು ರೈತರು ಹೋರಾಟ ನಡೆಸುತ್ತಿದ್ದರು. ಆದರೆ ಭಾನುವಾರ ಸುರಿದ ಭಾರೀ ಮಳೆಗೆ 9 ಅಡಿಯಷ್ಟು ನೀರು ಡ್ಯಾಂಗೆ ಹರಿದುಬಂದಿದೆ.

ಜಲಾಶಯವನ್ನು ಸರಿಯಾಗಿ ನಿರ್ವಹಣೆ ಮಾಡದ ಪರಿಣಾಮ ಕ್ರೆಸ್ಟ್ ಗೇಟ್ ಗಳನ್ನು ಸರಿಯಾಗಿ ಲಾಕ್ ಮಾಡಲಾಗಿಲ್ಲ. ಆದ್ದರಿಂದ ರಾತ್ರಿ ನೀರು ಹರಿದುಬಂದ ನಂತರ ಸಣ್ಣ ಪ್ರಮಾಣದಲ್ಲಿ ನೀರು ಪೋಲಾಗುತ್ತಿದೆ. ಹೀಗಾಗಿ ಡ್ಯಾಂ ನಿರ್ವಹಣೆ ಮಾಡದ ಅಧಿಕಾರಿಗಳ ವಿರುದ್ಧ ಸ್ಥಳೀಯರು ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.

Leave a Reply

Your email address will not be published. Required fields are marked *