Tuesday, 24th April 2018

ಬಾಲಕಿಯ ಮೇಲೆ ರೇಪ್: ಗುರುತು ಪತ್ತೆಗೆ ಸಾಮಾಜಿಕ ಜಾಲತಾಣ ಮೊರೆ ಹೋದ ಪೊಲೀಸರು

ಸೂರತ್: ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದ್ದ ಬಾಲಕಿಯ ಮೃತ ಪತ್ತೆಯಾಗಿ 10 ದಿನಗಳು ಕಳೆದರೂ ಆಕೆಯ ಗುರುತು ಪತ್ತೆ ಹಚ್ಚುವಲ್ಲಿ ಸೂರತ್ ಪೊಲೀಸರು ವಿಫಲರಾಗಿದ್ದಾರೆ.

ಘಟನೆ ಬೆಳಕಿಗೆ ಬಂದು ಹತ್ತು ದಿನಗಳು ಕಳೆದರು ಮಾಹಿತಿ ನೀಡಲು ಯಾರು ಬಾರದ ಕಾರಣ ಸೂರತ್ ಪೊಲೀಸರು ಬಾಲಕಿಯ ಮಾಹಿತಿ ಕಲೆ ಹಾಕಲು ಸಾಮಾಜಿಕ ಜಾಲತಾಣ ಮೊರೆ ಹೋಗಿದ್ದಾರೆ. ದುರ್ಷಮಿಗಳ ಈ ಕೃತ್ಯದ ವಿರುದ್ಧ ಸೂರತ್ ನಗರದಲ್ಲಿ ಸಾವಿರಾರು ಜನರು ಭಾನುವಾರ ಪ್ರತಿಭಟನೆ  ನಡೆಸಿದ್ದರು. ಬಳಿಕ ಸೋಮವಾರ ಬೆಳಗ್ಗೆ ಈ ಪ್ರಕರಣವನ್ನು ಸಿಬಿಐ ಗೆ ವಹಿಸಲಾಗಿತ್ತು.

ಬಾಲಕಿಯ ಬಗ್ಗೆ ಮಾಹಿತಿ ಪಡೆಯಲು ನೆರೆಯ ರಾಜ್ಯಗಳ ಪೊಲೀಸರ ಸಹಾಯ ಪಡೆಯಲಾಗುತ್ತಿದೆ. ಬಾಲಕಿಯ ಡಿಎನ್‍ಎ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ಮುಖ್ಯ ಅಧಿಕಾರಿ ಸತೀಶ್ ಶರ್ಮಾ ತಿಳಿಸಿದ್ದಾರೆ.

ಬಾಲಕಿಯ ವಿವರಗಳನ್ನು ಪಡೆಯಲು ಈಗಾಗಲೇ ಗುಜರಾತ್ ಹಾಗೂ ನೆರೆಯ ರಾಜ್ಯಗಳ 8 ಸಾವಿರಕ್ಕೂ ಬಾಲಕಿಯರ ನಾಪತ್ತೆ ದೂರುಗಳನ್ನು ಪರಿಶೀಲನೆ ಮಾಡಲಾಗಿದೆ. ಅಲ್ಲದೇ ಘಟನೆ ನಡೆದ ಸ್ಥಳದಿಂದ 1.5 ಕಿಮೀ ದೂರದ ಎಲ್ಲಾ ವಸತಿ ಪ್ರದೇಶ ಪ್ರತಿ ಮನೆ ಪರಿಶೀಲನೆ ನಡೆಸಿರುವುದಾಗಿ ತಿಳಿಸಿದ್ದಾರೆ. ಅಲ್ಲದೇ ಬಾಲಕಿ ಕುಟುಂಬ ಬಂಗಾಳ ಅಥವಾ ಒಡಿಸ್ಸಾ ದಿಂದ ನಗರಕ್ಕೆ ವಲಸೆ ಬಂದಿರುವ ಕುರಿತು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಏಪ್ರಿಲ್ 6 ರಂದು ಬಾಲಕಿಯ ಮೃತ ದೇಹವನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಈ ವೇಳೆ ಬಾಲಕಿಯ ದೇಹದ ಮೇಲೆ 86 ಗಾಯದ ಗುರುತು ಪತ್ತೆಯಾಗಿತ್ತು.

Leave a Reply

Your email address will not be published. Required fields are marked *