Thursday, 21st September 2017

ಮಂಗಳೂರಿಗೆ ಬಂದಿಳಿದ ಅಪ್ಘಾನಿನ ಮೊದಲ ಮಹಿಳಾ ಪೈಲೆಟ್

ಮಂಗಳೂರು: ವಿಮಾನದಲ್ಲಿ ಏಕಾಂಗಿಯಾಗಿ ವಿಶ್ವ ಪರ್ಯಟನೆ ಮಾಡುತ್ತಿರುವ ಅಫ್ಘಾನಿಸ್ತಾನ ಮೂಲದ ಮೊದಲ ಮಹಿಳಾ ಪೈಲೆಟ್ ಶಹಿಸ್ಥಾ ಮಂಗಳೂರಿಗೆ ಭೇಟಿ ನೀಡಿದ್ದಾರೆ.

18ನೇ ವರ್ಷದಲ್ಲೇ ವಿಮಾನ ಚಲಾಯಿಸಿ ಗಮನ ಸೆಳೆದಿದ್ದ ಶಹಿಸ್ಥಾಗೆ ಈಗ 29ರ ಹರೆಯ. ಇದೀಗ ಪ್ರಪಂಚ ಪರ್ಯಟನೆ ಆರಂಭಿಸಿರುವ ಶಹಿಸ್ಥಾ ಇಲ್ಲಿಯವರೆಗೆ ಭಾರತ ಈಜಿಪ್ಟ್, ಸಿಂಗಾಪುರ ಸೇರಿದಂತೆ 19 ದೇಶಗಳನ್ನು ಸುತ್ತಿದ್ದಾರೆ.

ಶಹಿಸ್ಥಾ ಅಫ್ಘಾನಿಸ್ತಾನದ ನಿರಾಶ್ರಿತೆಯಾಗಿದ್ದು, ಸದ್ಯ ಅಮೆರಿಕದ ಕ್ಯಾಲಿಫೋರ್ನಿಯಾದಲ್ಲಿ ನೆಲೆಸಿದ್ದಾರೆ. ವಿಶ್ವ ಪರ್ಯಟನೆಯ ಒಟ್ಟು 28,800 ಕಿಮೀ ದೂರದ ಪ್ರವಾಸ 90 ದಿನಗಳ ಅವಧಿಯದ್ದಾಗಿದ್ದು ತಾಯ್ನಾಡು ಅಫ್ಘಾನಿಸ್ತಾನದಿಂದಲೇ ಈಕೆ ಪ್ರವಾಸ ಆರಂಭಿಸಿದ್ದರು. ಇದೀಗ ಮಸ್ಕತ್ ನಿಂದ ಮಂಗಳೂರಿಗೆ ಬಂದಿದ್ದಾರೆ.

ಎರಡು ದಿನ ಮಂಗಳೂರಿನ ಹೊಟೇಲ್ ಒಂದರಲ್ಲಿದ್ದು, ಮಂಗಳೂರಿನ ವಿಶೇಷ ಖಾದ್ಯ ಸವಿದು ಸದ್ದಿಲ್ಲದೆ ಪರ್ಯಟನೆ ತೆರಳಿದ್ದಾರೆ. ಅಫ್ಘಾನಿಸ್ತಾನದ ದಂಗೆಯ ಸಂದರ್ಭ ನಿರಾಶ್ರಿತರಾಗಿ ಅಮೆರಿಕಕ್ಕೆ ವಲಸೆ ಹೋಗಿದ್ದ ಶಹಿಸ್ಥಾ ಕ್ಯಾಲಿಫೋರ್ನಿಯಾದ ರಿಚ್ಮಂಡ್ ನಗರದಲ್ಲಿ ನೆಲೆಸಿದ್ದಾರೆ.

Leave a Reply

Your email address will not be published. Required fields are marked *