Sunday, 27th May 2018

Recent News

ವಿಡಿಯೋ ಲೀಕ್ ಬಗ್ಗೆ ನಟಿ ಸಂಜನಾ ಗಲ್ರಾನಿ ಹೇಳಿದ್ದು ಹೀಗೆ

ಬೆಂಗಳೂರು: ದಂಡುಪಾಳ್ಯ ಪಾರ್ಟ್-2 ಸಿನಿಮಾದ ವಿಡಿಯೋ ಲೀಕ್ ಆಗಿದ್ದು, ಈ ಕುರಿತು ನಟಿ ಸಂಜನಾ ಪ್ರತಿಕ್ರಿಯಿಸಿದ್ದು, ಇದರ ಯಾವುದರ ಬಗ್ಗೆ ನನಗೆ ಗೊತ್ತಿಲ್ಲ ಎಂದು ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

ಶುಕ್ರವಾರ ರಾಜ್ಯಾದ್ಯಂತ ಬಹು ನಿರೀಕ್ಷಿತ ಸಿನಿಮಾ ದಂಡುಪಾಳ್ಯ-2 ತೆರೆಕಂಡಿದ್ದು, ಈಗ ಸೆನ್ಸಾರ್ ಮಂಡಳಿ ಕತ್ತರಿ ಹಾಕಿದ್ದ ಸಂಜನಾರ ವಿಡಿಯೋ ಲೀಕ್ ಆಗಿ ವೈರಲ್ ಆಗಿದೆ. ಇದು ನನಗೆ ಆಶ್ಚರ್ಯವನ್ನು ಉಂಟು ಮಾಡಿದೆ. ಈ ವಿಡಿಯೋ ಯಾರು ಲೀಕ್ ಮಾಡಿದ್ದಾರೆ ಎಂಬುವುದು ನನಗೆ ಗೊತ್ತಿಲ್ಲ. ಈ ಬಗ್ಗೆ ಚಿತ್ರತಂಡದವರು ಸೇರಿ ಚರ್ಚೆ ಮಾಡುತ್ತಿದ್ದೇವೆ. ಈ ವೇಳೆ ನನಗೆ ಏನು ಹೇಳಲು ತೋಚುತ್ತಿಲ್ಲ ಎಂದು ನಟಿ ಸಂಜನಾ ಬೇಸರ ವ್ಯಕ್ತಪಡಿಸಿದ್ರು.

ಇದೇ ತಿಂಗಳು 21ರಂದು ಸಿನಿಮಾ ಹೈದ್ರಾಬಾದ್‍ನಲ್ಲಿ ತೆರೆಕಾಣಲಿದೆ. ಈ ಸಂಬಂಧ ಇಂದು ಬೆಳಗ್ಗೆ ಸಿನಿಮಾ ನಿರ್ದೇಶಕ ಶ್ರೀನಿವಾಸ ರಾಜು ಹೈದ್ರಾಬಾದ್ ಗೆ ತೆರಳಿದ್ದಾರೆ. ಅವರು ಬಂದ್ಮೇಲೆ ಲೀಕ್ ಆಗಿರೋ ಕುರಿತು ಚಿತ್ರತಂಡದೊಂದಿಗೆ ಬಂದು ಎಲ್ಲ ಪ್ರಶ್ನೆಗಳಿಗೆ ಸ್ಪಷ್ಟೀಕರಣ ನೀಡ್ತೀನಿ ಎಂದು ಸಂಜನಾ ಹೇಳಿದ್ದಾರೆ.

ಚಿತ್ರತಂಡ ನನ್ನೊಂದಿಗೆ ಇದೆ. ಈಗಾಗಲೇ ಪಾರ್ಟ್-3 ಸಿನಿಮಾದ ಚಿತ್ರೀಕರಣ ಸಹ ಮುಕ್ತಾಯವಾಗಿದೆ. ಚಿತ್ರತಂಡ ಸದಸ್ಯರ ನಡುವೆ ಯಾವುದೇ ವೈಮನಸ್ಸುಗಳಿಲ್ಲ. ಸಿನಿಮಾ ರಾಜ್ಯಾದ್ಯಂತ ಹೌಸ್ ಫುಲ್ ಪ್ರದರ್ಶನ ಕಾಣ್ತಾಯಿದೆ. ಇದು ಸಿನಿಮಾ ಪ್ರಚಾರ ಮಾಡುವ ಗಿಮಿಕ್ ಅಲ್ಲ ಎಂದು ಸಂಜನಾ ಸ್ಪಷ್ಟಪಡಿಸಿದ್ದಾರೆ.

ಏನಿದು ವಿವಾದ?: ನಟಿ ಸಂಜನಾ ಗಲ್ರಾನಿ ಬೆತ್ತಲಾಗಿರೋ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಗ್ಯಾಂಗ್-2 ಸಿನಿಮಾದಲ್ಲಿ ಚಿತ್ರೀಕರಿಸಿದ್ದ ದೃಶ್ಯ ಇದೀಗ ಲೀಕ್ ಆಗಿ ಹಲ್ ಚಲ್ ಎಬ್ಬಿಸಿದೆ. ಸೆನ್ಸಾರ್ ಮಂಡಳಿ ಈ ದೃಶ್ಯಕ್ಕೆ ಕತ್ತರಿ ಹಾಕಿದೆ. ಹೀಗಾಗಿ ಸಿನಿಮಾದಲ್ಲಿ ಈ ದೃಶ್ಯ ಕಾಣಿಸೋದಿಲ್ಲ. ರವಿಶಂಕರ್ ಪೋಲೀಸ್ ಆಫೀಸರ್ ಆಗಿದ್ದು ಸಂಜನಾಗೆ ಶಿಕ್ಷೆ ಕೊಡೋ ದೃಶ್ಯ ಇದಾಗಿದೆ. ಇನ್ನೂ ಸೆನ್ಸಾರ್ ಮಂಡಳಿ ಕೂಡ ಸ್ಪಷ್ಟನೆ ನೀಡಿದ್ದು, ನಮ್ಮಿಂದ ಯಾವುದೇ ದೃಶ್ಯ ಲೀಕ್ ಆಗಿಲ್ಲ ಅಂತ ತಿಳಿಸಿದೆ.

 

 

Leave a Reply

Your email address will not be published. Required fields are marked *