Wednesday, 20th June 2018

Recent News

ಜನಶಕ್ತಿ ಪಕ್ಷದಿಂದ ಪ್ರಿಯಾಮಣಿ ರಾಜಕೀಯಕ್ಕೆ ಎಂಟ್ರಿ !

ಬೆಂಗಳೂರು: ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿದ್ದಂತೆ ಸ್ಯಾಂಡಲ್‍ವುಡ್ ತಾರೆಯರು ರಾಜಕೀಯದತ್ತ ಮುಖ ಮಾಡುತ್ತಿದ್ದಾರೆ. ಈಗ ದಕ್ಷಿಣ ಭಾರತದಲ್ಲಿ ತಮ್ಮ ನಟನೆಯ ಮೂಲಕ ಹೆಸರು ಮಾಡಿರುವ ನಟಿ ಪ್ರಿಯಾಮಣಿ ಜನಶಕ್ತಿ ಪಕ್ಷದಿಂದ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಎಂಬ ಮಾತುಗಳು ಸಾಮಾಜಿಕ ಜಾಲತಾಣಗಳಲ್ಲಿ ಕೇಳಿ ಬರುತ್ತಿದೆ.

ಪ್ರಿಯಾಮಣಿ ಮದುವೆಯ ಬಳಿಕ ಲಾಂಗ್ ಗ್ಯಾಪ್ ನಂತರ ‘ಧ್ವಜ’ ಎಂಬ ಪೊಲಿಟಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಸಿನಿಮಾದಲ್ಲಿ ರಾಜಕೀಯ ದೃಶ್ಯಗಳನ್ನು ಒಳಗೊಂಡಿದ್ದು, ಚಿತ್ರದಲ್ಲಿ ಜನಶಕ್ತಿ ಎಂಬ ಪಕ್ಷದ ರಾಜಕೀಯ ಮಹಿಳೆಯಾಗಿ ಪ್ರಿಯಾಮಣಿ ನಟಿಸುತ್ತಿದ್ದಾರೆ. ಇದೇ ಸನ್ನಿವೇಶ ಚಿತ್ರೀಕರಣದ ಕೆಲವು ಫೋಟೋಗಳು ಫೇಸ್‍ಬುಕ್, ವಾಟ್ಸಪ್ ಸೇರಿದಂತೆ ಇನ್ನಿತರ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿವೆ. ಪ್ರಿಯಾಮಣಿ ತಮ್ಮ ಟ್ವಿಟರ್ ನಲ್ಲಿ ಮಹಾಶಿವರಾತ್ರಿಯ ಶುಭಾಶಯಗಳನ್ನು ಕೈ ಮುಗಿದು ಹೇಳುತ್ತಿರುವ ಫೋಟೋ ವೈರಲ್ ಆಗಿದೆ.

ರಿಯಲ್ ಸ್ಟಾರ್ ಉಪೇಂದ್ರ ಹೊಸ ಪಕ್ಷವೊಂದನ್ನು ಹಟ್ಟು ಹಾಕುವ ಮೂಲಕ ರಾಜಕೀಯಕ್ಕೆ ಎಂಟ್ರಿ ನೀಡಿದ್ದಾರೆ. ಇತ್ತ ಸ್ಯಾಂಡಲ್‍ವುಡ್ ಮಾಣಿಕ್ಯ ಸುದೀಪ್ ಸಹ ಜೆಡಿಎಸ್ ಪರವಾಗಿ ಚುನಾವಣಾ ಪ್ರಚಾರದಲ್ಲಿ ಭಾಗವಹಿಸುತ್ತಾರೆ ಎಂದು ಹೇಳಲಾಗಿದೆ. ಇತ್ತ ಹಾಸ್ಯ ನಟ ಸಾಧು ಕೋಕಿಲ ಮತ್ತು ಕನಸಿನ ಕನ್ಯೆ ಮಾಲಾಶ್ರೀ ಕಾಂಗ್ರೆಸ್ ಪಾಳಯದಲ್ಲಿ ಗುರುತಿಸಿಕೊಂಡಿದ್ದಾರೆ. ಹೀಗಾಗಿಯೇ ಪ್ರಿಯಾಮಣಿ ಅವರ ಶೂಟಿಂಗ್ ಫೋಟೋ ನೋಡಿದವ್ರು ರಾಜಕೀಯಕ್ಕೆ ಸೇರ್ತಾರೆ ಅಂತಾ ಹೇಳುತ್ತಿದ್ದಾರೆ.

Leave a Reply

Your email address will not be published. Required fields are marked *