Wednesday, 23rd May 2018

Recent News

ಚಿತ್ರದುರ್ಗದಲ್ಲಿ ತಮಟೆ ಸದ್ದಿಗೆ ಸಖತ್ ಸ್ಟೆಪ್ಸ್ ಹಾಕಿದ ನಟಿ ಭಾವನಾ

ಚಿತ್ರದುರ್ಗ: ಮರವಣಿಗೆಯೊಂದರಲ್ಲಿನ ತಮಟೆ ಸದ್ದಿಗೆ ನಟಿ ಭಾವನಾ ಅವರು ಸಖತ್ ಸ್ಟೆಪ್ಸ್ ಹಾಕಿದ್ದಾರೆ.

ನಗರದಲ್ಲಿಂದು ನಿಜಶರಣ ಅಂಬಿಗರ ಚೌಡಯ್ಯ ಜಯಂತೋತ್ಸವದ ಮೆರವಣಿಗೆ ನಡೆಯಿತು. ಈ ಮೆರವಣಿಗೆಯಲ್ಲಿ ನಟಿ ಭಾವನಾ ಕೂಡ ಭಾಗಿಯಾಗಿದ್ದು, ಕರುವಿನಕಟ್ಟೆ ವೃತ್ತದಲ್ಲಿ ಸಮುದಾಯದ ಮಹಿಳೆಯರೊಂದಿಗೆ ತಾವೂ ಕೂಡ ಹೆಜ್ಜೆ ಹಾಕುವ ಮೂಲಕ ಮನರಂಜಿಸಿದ್ರು. ಜಿಲ್ಲೆಯ ಬುರುಜನಹಟ್ಟಿ ಬಡವಾವಣೆಯ ನಿವಾಸಿಯಾಗಿರೋ ಇವರು ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಇತ್ತೀಚೆಗಷ್ಟೇ ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ, ಅವಕಾಶ ಕೊಟ್ಟರೆ ಚುನಾವಣೆಯಲ್ಲಿ ಸ್ಫರ್ಧಿಸುವುದಾಗಿ ಭಾವನಾ ಹೇಳಿದ್ದರು. ಚುನಾವಣೆಗಳು ಹತ್ತಿರ ಬರುತ್ತಿರುವುದರಿಂದ ಎಲ್ಲರ ರಕ್ತ ಬಿಸಿಯಾಗಿದೆ. ಹಾಗೆಯೇ ನನ್ನ ಎದೆ ಬಡಿತ ಹೆಚ್ಚಾಗಿದೆ. ಕಾಂಗ್ರೆಸ್ ವರಿಷ್ಠರು ಹಾಗು ಕಾರ್ಯಕರ್ತರ ಸಹಕಾರದೊಂದಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಉತ್ಸುಕಳಾಗಿದ್ದೇನೆ. ಅಲ್ಲದೇ ಈಗಾಗಲೇ ವಿಧಾನಸಭಾ ಚುನಾವಣೆಯಲ್ಲಿ ಚಿತ್ರದುರ್ಗ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಸ್ಪರ್ಧಿಸಲು ಸಕಲ ಸಿದ್ಧತೆ ನಡೆಸಿರುವುದಾಗಿ ಕೂಡ ತಿಳಿಸಿದ್ದರು.

ಆದರೆ ಪಕ್ಷದ ಹಿರಿಯರು, ಅಧ್ಯಕ್ಷರು, ಮುಖ್ಯಮಂತ್ರಿಗಳು ಹಾಗು ವರಿಷ್ಠರ ಸಹಕಾರ, ಮಾರ್ಗದರ್ಶನ ಮತ್ತು ಆಶೀರ್ವಾದದ ಅಗತ್ಯವಿದ್ದು, ಎಲ್ಲರ ಬೆಂಬಲದೊಂದಿಗೆ ಚಿತ್ರದುರ್ಗ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಜನರ ಮುಂದೆ ಬರಲು ಇಷ್ಟಪಡುತ್ತೆನೆ ಅಂತ ಹೇಳಿದ್ದರು. ಒಟ್ಟಿನಲ್ಲಿ ಚುನಾವಣೆ ಹತ್ತಿರ ಬರುತ್ತಿದ್ದಂತೆಯೇ ನಟಿ ತಮ್ಮ ಕ್ಷೇತ್ರದ ಜನರೊಂದಿಗೆ ಬೆರೆಯುತ್ತಿದ್ದಾರೆ.

Leave a Reply

Your email address will not be published. Required fields are marked *