Sunday, 24th June 2018

Recent News

ಅಂಧ ಮಕ್ಕಳೊಂದಿಗೆ ಬರ್ತ್ ಡೇ ಆಚರಿಸಿಕೊಂಡ ಅಮೂಲ್ಯ- ಮಕ್ಕಳಿಂದ ಅಮೂಲ್ಯರಿಗೆ ವಿಶೇಷ ಗಿಫ್ಟ್

ರಾಮನಗರ: ಅಮೂಲ್ಯ ಮದುವೆ ನಂತರ ತಮ್ಮ ಮೊಟ್ಟ ಮೊದಲ ಹುಟ್ಟು ಹಬ್ಬವನ್ನು ಅಂಧ ಮಕ್ಕಳ ಜೊತೆ ವಿಶಿಷ್ಟವಾಗಿ ಆಚರಿಕೊಳ್ಳುವ ಮೂಲಕ ಮತ್ತೆ ತಮ್ಮ ಸರಳತೆಯನ್ನು ಮರೆದಿದ್ದಾರೆ. ಮಕ್ಕಳು ನಟಿ ಅಮೂಲ್ಯ ಅಭಿನಯದ ಸಿನಿಮಾಗಳ ಡೈಲಾಗ್ ಹೇಳುವ ಮೂಲಕ ವಿಶೇಷ ಗಿಫ್ಟ್ ನೀಡಿದರು.

ನಟಿ ಅಮೂಲ್ಯ ಇಂದು ತಮ್ಮ 25ನೇ ವಸಂತಕ್ಕೆ ಕಾಲಿಟ್ಟಿದ್ದು, ತಮ್ಮ ಪತಿ ಜಗದೀಶ್ ಜೊತೆಯಲ್ಲಿ ರಾಮನಗರ ಹೊರವಲಯದ ಶ್ರೀ ಬಾಲಗಂಗಾಧರನಾಥ ಸ್ವಾಮಿ ಶಾಖಾ ಮಠದ ಅಂಧರ ಶಾಲೆಗೆ ತೆರಳಿ ಹುಟ್ಟುಹಬ್ಬ ಸಂಭ್ರಮವನ್ನು ಆಚರಿಸಿಕೊಂಡರು.

ಶಾಲೆಯ ಎಲ್ಲಾ ಮಕ್ಕಳಿಗೂ ಸಿಹಿ ವಿತರಿಸಿ, ಹಣ್ಣು-ಹಂಪಲು ಹಾಗೂ ಕಂಬಳಿಗಳನ್ನು ನೀಡಿದರು. ಇದೇ ವೇಳೆ ಮಠದ ಶ್ರೀ ಅನ್ನದಾನೇಶ್ವರ ಸಾಮೀಜಿಗಳ ಅಶೀರ್ವಾದವನ್ನು ಪಡೆದರು. ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅಮೂಲ್ಯ ಈ ಹಿಂದೆ ಮಠಕ್ಕೆ ಭೇಟಿ ನೀಡಿದ್ದ ಘಟನೆಯನ್ನು ನೆನಪಿಸಿಕೊಂಡರು. ಈಗ ಮೊದಲ ಬಾರಿಗೆ ಪತಿಯ ಮನೆಯಲ್ಲಿ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸಿದ್ದು, ಹೆಚ್ಚು ಖುಷಿ ನೀಡಿದೆ ಎಂದು ತಿಳಿಸಿದರು.

ಇನ್ನೂ ಅಂಧ ಮಕ್ಕಳ ಜೊತೆ ಕಳೆದ ಕಾಲ ವಿಶೇಷವಾಗಿದ್ದು, ನನ್ನ ಅಭಿನಯದ ಚಿತ್ರದ ಡೈಲಾಗ್‍ಗಳನ್ನು ಮಕ್ಕಳು ಹೇಳಿದ್ದು ಹೆಚ್ಚು ಖುಷಿ ನೀಡಿತು. ಮುಂದಿನ ದಿನಗಳಲ್ಲಿಯು ಸಹ ಮಠದ ಜೊತೆ ಉತ್ತಮ ಬಾಂಧವ್ಯವನ್ನು ಮುಂದುವರೆಸುವುದಾಗಿ ಹಾಗೂ ಮಕ್ಕಳ ಬಗ್ಗೆ ವಿಶೇಷ ಕಾಳಜಿ ತೆಗೆದುಕೊಳ್ಳುವುದಾಗಿ ತಿಳಿಸಿದರು.

Leave a Reply

Your email address will not be published. Required fields are marked *