Monday, 18th December 2017

Recent News

ಮೊದಲ ಮದುವೆ ವಾರ್ಷಿಕೋತ್ಸವಕ್ಕೆ ಭರ್ಜರಿ ಗಿಫ್ಟ್- 3 ಬೆಂಜ್ ಕಾರುಗಳನ್ನು ಖರೀದಿಸಿದ ಯಶ್

ಬೆಂಗಳೂರು: ಡಿಸೆಂಬರ್ 9ಕ್ಕೆ ಯಶ್-ರಾಧಿಕಾ ದಂಪತಿಗೆ ಮೊದಲ ಮದುವೆ ವಾರ್ಷಿಕೋತ್ಸವ. ಈ ಹಿನ್ನೆಲೆಯಲ್ಲಿ ನಟ ಯಶ್ ಮೂರು ಬೆಂಜ್ ಕಾರುಗಳನ್ನು ಖರೀದಿಸಿದ್ದಾರೆ.

ಬೆಂಗಳೂರಿನ ಶೋರೂಂಗೆ ಬುಧವಾರದಂದು ಭೇಟಿ ನೀಡಿದ ಯಶ್ ಮೂರು ಟಾಪ್ ಎಂಡ್ ಮಾಡಲ್ ಕಾರು ಖರೀದಿ ಮಾಡಿದ್ದಾರೆ. ಬೆಂಜ್ ಜಿಎಲ್‍ಸಿ, ಬೆಂಜ್ ಇ ಕ್ಲಾಸ್, ಬೆಂಜ್ ಬಿಎಲ್‍ಸಿ ಎಎಂಜಿ ಕಾರುಗಳನ್ನು ಇಷ್ಟಪಟ್ಟು ಖರೀದಿಸಿದ್ದಾರೆ. ಬೆಂಜ್ ಇ ಕ್ಲಾಸ್ ಕಾರು ಅಪ್ಪ-ಅಮ್ಮನಿಗೆ, ಬೆಂಜ್ ಜಿಎಲ್‍ಸಿ ಪತ್ನಿ ರಾಧಿಕಾಗೆ ಹಾಗೂ ಬೆಂಜ್ ಬಿಎಲ್‍ಸಿ ಎಎಂಜಿ ಕಾರನ್ನು ತಮಗಾಗಿ ರಾಕಿಂಗ್ ಸ್ಟಾರ್ ಯಶ್ ಖರೀದಿಸಿದ್ದಾರೆ.

ಒಂದೇ ಶೋರೂಮಿನಲ್ಲಿ ಮೂರು ಕಾರ್ ಖರೀದಿಸಿದ ಮೊದಲಿಗರು ಯಶ್ ಆಗಿದ್ದಾರೆ. ಕಾರುಗಳಿಗೆ ನಿರ್ದಿಷ್ಟವಾಗಿ ಎಷ್ಟು ಖರ್ಚಾಗಿದೆ ಎಂದು ತಿಳಿದುಬಂದಿಲ್ಲ. ಆದ್ರೆ ಮಾರುಕಟ್ಟೆ ಮೌಲ್ಯದ ಪ್ರಕಾರ ಬೆಂಜ್ ಇ ಕ್ಲಾಸ್ ಕಾರು 77 ಲಕ್ಷ ರೂ., ಬೆಂಜ್ ಜಿಎಲ್‍ಎಸ್ ಕಾರು 1.10 ಕೋಟಿ ರೂ. ಹಾಗೂ ಬೆಂಜ್ ಜಿಎಸ್‍ಸಿ ಎಎಮ್‍ಜಿ ಕಾರು 92 ಲಕ್ಷ ರೂ. ಬೆಲೆಯದ್ದಾಗಿದೆ.

ಮೊದಲ ವಾರ್ಷಿಕೋತ್ಸವ ಆಚರಿಸಲು ಕೆಲವೇ ದಿನಗಳಿರುವ ಹಿನ್ನೆಲೆಯಲ್ಲಿ ರಾಧಿಕಾ ಪಂಡಿತ್ ಅಭಿಮಾನಿಗಳಿಗೆ ಪ್ರತಿದಿನ ಗುಡ್ ನ್ಯೂಸ್ ಕೊಡಲು ಆರಂಭಿಸಿದ್ದಾರೆ. ಗುಡ್‍ನ್ಯೂಸ್ ಎಂದರೆ ಹೊಸ ಸಿನಿಮಾದಲ್ಲಿ ಅಭಿನಯಿಸುವ ಬಗ್ಗೆ ಯಾವುದೇ ಮಾಹಿತಿ ತಿಳಿಸುತ್ತಿಲ್ಲ. ಬದಲಾಗಿ ಮದುವೆಯ ತಯಾರಿ, ಮದುವೆಯ ಎಕ್ಸ್ ಕ್ಲೂಸಿವ್ ಫೋಟೋ ಮತ್ತು ಸಣ್ಣ ವಿಡಿಯೋಗಳನ್ನು ಫೇಸ್‍ಬುಕ್ ನಲ್ಲಿ ಶೇರ್ ಮಾಡುತ್ತಿದ್ದಾರೆ.

ಕಳೆದ ಡಿಸೆಂಬರ್ ಡಿಸೆಂಬರ್ 9 ರಂದು ಯಶ್ ಹಾಗೂ ರಾಧಿಕಾ ಪಂಡಿತ್ ಹಸೆಮಣೆ ಏರಿದ್ದರು. ಇಬ್ಬರ ವಿವಾಹ ಸಮಾರಂಭಕ್ಕಾಗಿ ಬೆಂಗಳೂರಿನ ತಾಜ್ ವೆಸ್ಟ್ ಎಂಡ್ ಹೋಟೆಲ್ ನಲ್ಲಿ ಐತಿಹಾಸಿಕ ಸೋಮನಾಥೇಶ್ವರ ದೇವಸ್ಥಾನದ ಸೆಟ್ ನಿರ್ಮಾಣವಾಗಿತ್ತು. ಒಂದು ಸಾವಿರಕ್ಕೂ ಹೆಚ್ಚು ತಾವರೆ ಹೂ, ಸೇವಂತಿ ಹೂ, ನಂದಿ ಬಟ್ಟಲು ಹೂ, ಮೈಸೂರು ಮಲ್ಲಿಗೆ ಹೂ, ಸುಗಂಧ ರಾಜ ಹೂಗಳಿಂದ ಅಲಂಕಾರಗೊಂಡಿದ್ದ ಮದುವೆ ಮಂಟಪದಲ್ಲಿ ರಾಧಿಕಾ ಪಂಡಿತ್ ರವರಿಗೆ ಯಶ್ ತಾಳಿ ಕಟ್ಟಿದ್ದರು. ಅರಮನೆ ಮೈದಾನದಲ್ಲಿ ಯಶ್-ರಾಧಿಕಾ ಪಂಡಿತ್ ರವರ ಅದ್ಧೂರಿ ಆರತಕ್ಷತೆ ನಡೆದಿತ್ತು.

Leave a Reply

Your email address will not be published. Required fields are marked *