Sunday, 25th February 2018

ಶಿವರಾಜ್ ಕುಮಾರ್ ಅಭಿನಯದ `ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ರಾಜ್ಯಾದ್ಯಂತ ತೆರೆಗೆ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜ್‍ಕುಮಾರ್ ನಟನೆಯ 114ನೇ ಸಿನಿಮಾ `ಬಂಗಾರ ಸನ್ ಆಫ್ ಬಂಗಾರದ ಮನುಷ್ಯ’ ಚಿತ್ರ ಇಂದು ರಾಜ್ಯಾದ್ಯಂತ ತೆರೆಕಂಡಿದೆ.

ಯೋಗಿ ಜಿ ರಾಜ್ ನಿರ್ದೇಶನದಲ್ಲಿ ಈ ಚಿತ್ರ ಮೂಡಿಬಂದಿದ್ದು, ಜಯಣ್ಣ ಮತ್ತು ಭೋಗೇಂದ್ರ ನಿರ್ಮಿಸಿದ್ದಾರೆ. ಶಿವರಾಜ್‍ಕುಮಾರ್ ಎದುರು ವಿದ್ಯಾ ಪ್ರದೀಪ್ ನಾಯಕಿಯಾಗಿ ನಟಿಸಿದ್ದಾರೆ. ಜೊತೆಗೆ ಚಿಕ್ಕಣ್ಣ, ಸಾಧು ಕೋಕಿಲ, ಶ್ರೀನಿವಾಸಮೂರ್ತಿ, ಶಿವರಾಮಣ್ಣ, ಶ್ರೀನಾಥ್, ಸದಾಶಿವ ಬ್ರಹ್ಮಾವರ್, ಶರತ್ ಲೋಹಿತಾಶ್ವ, ಮೈಕೋ ನಾಗರಾಜ್ ಸೇರಿದಂತೆ ಹಲವರು ನಟಿಸಿದ್ದಾರೆ.

ಜೈಆನಂದ್ ಅವರ ಛಾಯಾಗ್ರಹಣವಿರೋ ಈ ಚಿತ್ರಕ್ಕೆ ವಿ.ಹರಿಕೃಷ್ಣ ಸಂಗೀತ ಸಂಯೋಜನೆಯಲ್ಲಿ ಹಾಡುಗಳು ಕೇಳುಗರ ಹೃದಯ ಗೆದ್ದಿದ್ದು ಚಿತ್ರರಸಿಕರ ಮುಂದೆ ಇಂದು ಮರಿ ಬಂಗಾರದ ಮನುಷ್ಯನ ದರ್ಶನವಾಗಲಿದೆ. ಚಿತ್ರಕ್ಕೆ ಎಂ.ಎಸ್. ರಮೇಶ್ ಅವರ ಸಂಭಾಷಣೆಯಿದೆ.

ಪಾರ್ವತಮ್ಮ ಅನಾರೋಗ್ಯ ಹಿನ್ನಲೆಯಲ್ಲಿ ಸಿನಿಮಾ ರಿಲೀಸ್ ಮುಂದೂಡಿಕೆ ಆಗುತ್ತೆ ಅಂತಿದ್ರು. ಆದ್ರೆ ಎಂದಿನಿಂತೆ ಇಂದೇ ಸಿನಿಮಾ ರಿಲೀಸ್ ಆಗಿದೆ.

Leave a Reply

Your email address will not be published. Required fields are marked *