Thursday, 22nd March 2018

ಸಾಮಾನ್ಯರಂತೆ ಸುಳ್ಯದ ಮಸೀದಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ

ಮಂಗಳೂರು: ಖ್ಯಾತ ಮಲೆಯಾಳಂ ನಟ ಮಮ್ಮುಟ್ಟಿ ಕರಾವಳಿಯ ಮಸೀದಿಯೊಂದಕ್ಕೆ ತೆರಳಿ ಶುಕ್ರವಾರ ಜುಮಾ ನಮಾಝ್ ನಲ್ಲಿ ಸಾಮೂಹಿಕ ಪ್ರಾರ್ಥನೆಯಲ್ಲಿ ಪಾಲ್ಗೊಂಡಿದ್ದಾರೆ.

ಸಿನೆಮಾ ಶೂಟಿಂಗ್ ಒಂದರ ಚಿತ್ರೀಕರಣಕ್ಕಾಗಿ ಕಳೆದ ಒಂದು ವಾರದಿಂದ ಮಂಗಳೂರಿನ ಸುಳ್ಯದ ಕೊಯಿಲದಲ್ಲಿರುವ ಅವರು ಶುಕ್ರವಾರ ಸಾಮಾನ್ಯರಂತೆ ನಿಂತು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದ್ದಾರೆ. ನಗರದ ಕೊಯಿಲದ ಅತ್ತೂರು ಮಸೀದಿಗೆ ತೆರಳಿದ ಅವರು ತಲೆಗೆ ಟೊಪ್ಪಿ ಧರಿಸಿ, ಸಾಮಾನ್ಯರಂತೆ ನಿಂತು ಪ್ರಾರ್ಥಿಸಿದರು.

ಶುಕ್ರವಾರ ನಮಾಝ್ ಮುಸ್ಲಿಮರಿಗೆ ಕಡ್ಡಾಯವಾಗಿದ್ದು, ಬಡವ ಶ್ರೀಮಂತ ಎನ್ನುವ ಭೇದವಿಲ್ಲದೇ ಭುಜಕ್ಕೆ ಭುಜ ತಾಗಿಸಿಕೊಂಡು ನಿಂತು ನಮಾಝ್ ಮಾಡುವ ಕ್ರಮವಿದೆ. ಅಂತಹ ಕ್ರಮವನ್ನು ಪಾಲಿಸಿದ ಮಮ್ಮುಟ್ಟಿಯವರ ಫೋಟೋ ವೊಂದು ಜಾಲತಾಣಗಳಲ್ಲಿ ವೈರಲ್ ಆಗಿದೆ. ಈ ಚಿತ್ರದಲ್ಲಿ ನಟ ಮಮ್ಮುಟ್ಟಿ ತಲೆಗೆ ಟೊಪ್ಪಿ ಧರಿಸಿ, ಕೈಕಟ್ಟಿ ನಮಾಝ್ ನಲ್ಲಿ ನಿರತವಾಗಿರುವುದು ಕಂಡುಬಂದಿದೆ.

ಮಸೀದಿಗೆ ಮಮ್ಮುಟ್ಟಿ ಬರಲಿ, ವಿಪ್ರೋ ಮುಖ್ಯಸ್ಥ ಅಜೀಂ ಪ್ರೇಮ್ ಜೀಯೇ ಬರಲಿ ಸಾಮಾನ್ಯರ ಸಾಲಿನಲ್ಲಿಯೇ ನಿಂತು ಅಲ್ಲಾಹ್ ನನ್ನು ಸ್ತುತಿಸಬೇಕು ಹೊರತು, ಅವರಿಗೆ ಯಾವುದೇ ವಿಶೇಷ ಸ್ಥಾನಮಾನವಾಗ ಇಲ್ಲ. ಅವರ ವೈಯಕ್ತಿಕ ಪದವಿ ಹಾಗೂ ಶ್ರೀಮಂತಿಕೆ ಮಸೀದಿ ಒಳಭಾಗದಲ್ಲಿ ನಡೆಯುವ ಪ್ರಾರ್ಥನೆಗೂ ಸಂಬಂಧವಿರದು ಎಂದು ಮಸೀದಿ ಮುಖಂಡರು ಪ್ರತಿಕ್ರಿಯಿಸಿದ್ದಾರೆ. ಕಳೆದ ತಿಂಗಳು ಕೇರಳದ ಮಸೀದಿಯೊಂದರಲ್ಲೂ ಸಾಮಾನ್ಯರಂತೆ ಕೂತು ಪ್ರಾರ್ಥಿಸುತ್ತಿದ್ದ ಫೋಟೋವು ತುಂಬಾನೇ ವೈರಲ್ ಆಗಿತ್ತು. ಇದನ್ನೂ ಓದಿ: ಕುಕ್ಕೆ ಸುಬ್ರಹ್ಮಣ್ಯ ದೇವರ ದರ್ಶನ ಪಡೆದ ಖ್ಯಾತ ಬಹುಭಾಷಾ ನಟ ಮೋಹನ್ ಲಾಲ್

Leave a Reply

Your email address will not be published. Required fields are marked *