Friday, 22nd June 2018

Recent News

ನಟಿಯ ನಗ್ನ ಫೋಟೋ, ವಿಡಿಯೋ ಬಯಸಿದ್ದ ನಟ ದಿಲೀಪ್

ತಿರುವನಂತಪುರ: ಬಹುಭಾಷಾ ನಟಿಯ ಅಪಹರಣ ಮತ್ತು ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮಲಯಾಳಂನ ಖ್ಯಾತ ನಟ ದಿಲೀಪ್ ಜೈಲು ಪಾಲಾಗಿದ್ದಾರೆ. ದಿಲೀಪ್ ನಟಿಯ ಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಮೇಲಿನ ದೌರ್ಜನ್ಯದ ದೃಶ್ಯ ಹಾಗೂ ನಗ್ನ ಫೋಟೋವನ್ನ ಬಯಸಿದ್ದರು ಎಂದು ವರದಿಯಾಗಿದೆ.

ನಾಲ್ಕು ವರ್ಷಗಳ ಹಿಂದೆಯೇ ಅಂದರೆ 2013ರಲ್ಲಿ ದಿಲೀಪ್ ಈ ಕೃತ್ಯಕ್ಕೆ ಸಂಚು ರೂಪಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅದಕ್ಕಾಗಿ 1.5 ಕೋಟಿ ರೂಪಾಯಿ ಮೊತ್ತದ ಸುಪಾರಿಗೆ ಒಪ್ಪಂದವಾಗಿತ್ತು. ಅದಕ್ಕಿಂತಲೂ ಭಯಾನಕ ಎಂದರೆ ನಟ ದಿಲೀಪ್ ತನ್ನ ಟಾರ್ಗೆಟ್ ಆಗಿದ್ದ ಆ ನಟಿಯ ಬೆತ್ತಲೆ ಫೋಟೋ ಮತ್ತು ದೌರ್ಜನ್ಯದ ವೀಡಿಯೋ ಬೇಕು ಎಂದು ಪ್ರಮುಖ ಆರೋಪಿ ಪಲ್ಸರ್ ಸುನಿಲ್‍ನಿಗೆ ಹೇಳಿದ್ರು ಎಂದು ಪೊಲೀಸರು ತಿಳಿಸಿದ್ದಾರೆ.

ತಮ್ಮ ಮೊದಲ ಪತ್ನಿ ಮಂಜು ವಾರಿಯರ್ ಜೊತೆಗಿನ ಸಂಬಂಧ ಮುರಿದು ಬೀಳೋದಕ್ಕೆ ನಟಿಯೇ ಕಾರಣ ಅನ್ನೋ ಸಿಟ್ಟು ನಟ ದಿಲೀಪ್‍ಗೆ ಇತ್ತು. ಅದಕ್ಕಾಗಿ ಸೇಡು ತೀರಿಸಿಕೊಳ್ಳಲು ನಿರ್ಧರಿಸಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ.

ಆದ್ರೆ ಇದನ್ನೆಲ್ಲಾ ತಳ್ಳಿ ಹಾಕಿರುವ ದಿಲೀಪ್ ಪರ ವಕೀಲರಾದ ಕೆ. ರಾಮ್‍ಕುಮಾರ್, ದಿಲೀಪ್ ಸುಮಾರು ಸಿನಿಮಾಗಳಲ್ಲಿ ನಟಿಸಿದ್ದಾರೆ. ಆದ್ರೆ ಇದಂತೂ ನಿಜಕ್ಕೂ ಅದ್ಭುತ ಕಲ್ಪನೆಯುಳ್ಳ ಸ್ಕ್ರಿಪ್ಟ್ ನಂತಿದೆ. ಯಾವುದೇ ಸಾಕ್ಷ್ಯಾಧಾರಗಳಿಲ್ಲದೆ ದಿಲೀಪ್‍ರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗ್ತಾಯಿದೆ ಎಂದಿದ್ದಾರೆ.

ಇದನ್ನೂ ಓದಿ: ಬಹುಭಾಷಾ ನಟಿ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣ- ಮಲೆಯಾಳಂ ನಟ ದಿಲೀಪ್ ಬಂಧನವಾಗಿದ್ದು ಯಾಕೆ?

ದಿಲೀಪ್ ಮತ್ತು ಪಲ್ಸರ್ ಸುನಿ ತುಂಬಾ ಆತ್ಮೀಯತೆ ಹೊಂದಿದ್ದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಆದ್ರೆ ದಿಲೀಪ್ ಮಾತ್ರ ಪಲ್ಸರ್ ಸುನಿ ಯಾರೆಂಬುದೇ ಗೊತ್ತಿಲ್ಲ ಎಂದಿದ್ದಾರೆ. ಕಳೆದ ವರ್ಷ ನವೆಂಬರ್‍ನಲ್ಲಿ ನಡೆದ ದಿಲೀಪ್ ಅವರ ತ್ರಿಸ್ಸೂರ್ ಚಿತ್ರದ ಚಿತ್ರೀಕರಣದ ಸೆಟ್‍ನಲ್ಲಿ ಪಲ್ಸರ್ ಸುನಿ ಇದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಚಿತ್ರೀಕರಣದ ವೇಳೆ ಪಲ್ಸರ್ ಸುನಿ ಇದ್ದ ಫೋಟೋವನ್ನ ಕೆಲವು ಮಾಧ್ಯಮಗಳು ಪ್ರಸಾರ ಮಾಡಿವೆ. ಆದ್ರೆ ನಟ ದಿಲೀಪ್ ಪರ ವಕೀಲರು ಈ ವಾದಕ್ಕೆ ಸವಾಲೆಸೆದಿದ್ದು, ದಿಲೀಪ್ ಅವರು ಒಬ್ಬ ಸೂಪರ್ ಸ್ಟಾರ್. ಚಿತ್ರೀಕರಣದ ವೇಳೆ ಅವರನ್ನು ನೋಡಲು ಸಾಕಷ್ಟು ಅಭಿಮಾನಿಗಳು ಬರ್ತಿರ್ತಾರೆ. ಅವರಿಗೆ ಎಲ್ಲರೂ ಗೊತ್ತಿರಲ್ಲ ಎಂದು ವಾದಿಸಿದ್ದಾರೆ.

ದಿಲೀಪ್ ಅವರ ಜಾಮೀನು ಅರ್ಜಿಯನ್ನು ಎರಡು ದಿನಗಳ ಬಳಿಕ ವಿಚಾರಣೆ ಮಾಡುವುದಾಗಿ ಕೋರ್ಟ್ ಹೇಳಿದೆ. ಪೊಲೀಸರು 3 ದಿನಗಳವರೆಗೆ ದಿಲೀಪ್ ಅವರನ್ನ ವಶಕ್ಕೆ ನೀಡಬೇಕೆಂದು ಕೇಳಿದ್ದರು. ಆದ್ರೆ ಕೋರ್ಟ್ ವಿಚಾರಣೆಗಾಗಿ 2 ದಿನಗಳ ನ್ಯಯಾಂಗ ಬಂಧನ ವಿಧಿಸಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಚಿತ್ರರಂಗದ ಇತರರನ್ನೂ ಪೊಲೀಸರು ವಿಚಾರಣೆಗೆ ಒಳಪಡಿಸುವ ಸಾಧ್ಯತೆಯಿದೆ.

Leave a Reply

Your email address will not be published. Required fields are marked *