Sunday, 17th December 2017

ನಟ, ಸಿಸಿಎಲ್ ಆಟಗಾರ ಧ್ರುವ ಶರ್ಮಾ ಇನ್ನಿಲ್ಲ

ಬೆಂಗಳೂರು: ನಟ ಮತ್ತು ಸೆಲೆಬ್ರಿಟಿ ಕ್ರಿಕೆಟ್ ಲೀಗ್‍ನ ಖ್ಯಾತ ಆಟಗಾರ ವಿಕಲಚೇತನ ಪ್ರತಿಭೆ ಧ್ರುವ ಶರ್ಮಾ ವಿಧಿವಶರಾಗಿದ್ದಾರೆ.

ಬಹು ಅಂಗಾಂಗ ವೈಫಲ್ಯದಿಂದ ಧ್ರುವ ಶರ್ಮಾ ಬೆಂಗಳೂರಿನ ಯಶವಂತಪುರದಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಇವರಿಗೆ 35 ವರ್ಷ ವಯಸ್ಸಾಗಿತ್ತು. ಇವರು ಸಿಸಿಎಲ್‍ನಲ್ಲಿ ಕರ್ನಾಟಕ ಬುಲ್ಡೋಜರ್ಸ್‍ನಲ್ಲಿ ಉಪ ನಾಯಕರಾಗಿದ್ದರು. ಸ್ನೇಹಾಂಜಲಿ, ನೀನಂದ್ರೆ ನನಗಿಷ್ಟ, ತಿಪ್ಪಾಜಿ ಸರ್ಕಲ್ ಸಿನಿಮಾದಲ್ಲಿ ನಟಿಸಿದ್ದರು.

ಉದ್ಯಮಿ, ನಟರೂ ಆಗಿರುವ ಸತೀಶ್ ಶರ್ಮಾ ಅವರ ಪುತ್ರರಾಗಿರುವ ಧ್ರುವ ಶರ್ಮಾ 2005ರಲ್ಲಿ ವಿಶ್ವ ಕಿವುಡರ ಕ್ರಿಕೆಟ್‍ನಲ್ಲಿ ಭಾರತ ತಂಡದಲ್ಲಿ ಆಡಿದ್ದರು. ವಾಕ್-ಶ್ರವಣ ದೋಷದಿಂದಾಗಿ ಬಾಲ್ಯದಿಂದಲೇ ಸಾಕಷ್ಟು ಅವಮಾನ ಎದುರಿಸಿದ್ದ ಧ್ರುವ ಶರ್ಮಾ ಆ ಎಲ್ಲ ನಿಂದನೆಗಳನ್ನು ಮೆಟ್ಟಿ ನಿಂತಿದ್ದರು.

ಕಾಲೇಜು ದಿನಗಳಲ್ಲಿ ಪ್ರಾಧ್ಯಾಪಕರ ಪಾಠ ಕೇಳ್ತಿಲ್ಲ ಅನ್ನೋ ಕಾರಣ ಕೊಟ್ಟು ಕಾಲೇಜಿನಿಂದಲೇ ಹೊರಹಾಕಿದ್ದರು. ಸ್ಯಾಂಡಲ್‍ವುಡ್‍ನ ಅಮ್ಮ ಪಾರ್ವತಮ್ಮ ರಾಜ್‍ಕುಮಾರ್ ಕೂಡ ಧ್ರುವ ಅವರ ಪ್ರತಿಭೆಗೆ ಮಾರು ಹೋಗಿದ್ದರು. ಕೇವಲ ನಟ ಮಾತ್ರವಲ್ಲದೇ ಧ್ರುವ ಒಳ್ಳೆಯ ಸ್ಟಂಟ್ ಕೂಡಾ ಮಾಡುತ್ತಿದ್ದರು.

Leave a Reply

Your email address will not be published. Required fields are marked *