ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಕೇಸಿಗೆ ಹೊಸ ಟ್ವಿಸ್ಟ್

ಚಿಕ್ಕಮಗಳೂರು: ಡಿವೈಎಸ್‍ಪಿ ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಹಾಗೂ ತೇಜಸ್ ಗೌಡ ಕಿಡ್ನಾಪ್ ಪ್ರಕರಣ ಸಂಬಂಧ ಪ್ರವೀಣ್ ಖಾಂಡ್ಯ ಸಿಗೋವರ್ಗೂ ಅವನೇ ಪ್ರಕರಣದ ಕಿಂಗ್‍ಪಿನ್ ಎಂದು ಹೇಳಲಾಗ್ತಿತ್ತು. ಆದ್ರೆ, ಸಿಐಡಿ ಅಧಿಕಾರಿಗಳ ಮುಂದೆ ಪ್ರವೀಣ್ ಖಾಂಡ್ಯ ಬಾಯ್ಬಿಟ್ಟಿರೋ ಸತ್ಯ ನೋಡಿದ್ರೆ ಪ್ರಕರಣದ ದಿಕ್ಕೇ ಬದಲಾಗುವಂತಿದೆ.

ಜುಲೈ 5ರಂದು ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆ ಮಾಡಿಕೊಂಡ ದಿನದಿಂದ ಇಲ್ಲೀತನಕ ಪ್ರಕರಣದ ಕಿಂಗ್‍ಪಿನ್ ಪ್ರವೀಣ್ ಖಾಂಡ್ಯನ ಮೇಲೆ ಎಲ್ಲರ ಕಣ್ಣು ಬಿದ್ದಿತ್ತು. ಪೊಲೀಸರು ಕೂಡ ನ್ಯಾಯ ಕೊಡಿಸಬೇಕೆಂದು ಖಾಂಡ್ಯನಿಗಾಗಿ ಊರೂರು ಅಲೆದ್ರು. ಆದ್ರೀಗ, ಪ್ರವೀಣ್ ಖಾಂಡ್ಯ ಸಿಐಡಿ ಮುಂದೆ ಉಲ್ಟಾ ಹೊಡೆದಿದ್ದಾನೆ. ಕಲ್ಲಪ್ಪ ಹಂಡಿಭಾಗ್ ಆತ್ಮಹತ್ಯೆಗೂ ನನಗೂ ಸಂಬಂಧವಿಲ್ಲ ಎಂದು ಹೇಳಿದ್ದಾನೆ. ಇನ್ನು ತೇಜಸ್‍ಗೌಡ ಅಪಹರಣ ಪ್ರಕರಣದಲ್ಲೂ ನನ್ನ ಹಾಗೂ ಕಲ್ಲಪ್ಪನ ಪಾತ್ರವಿಲ್ಲ. ಅಸಲಿಗೆ ತೇಜಸ್‍ಗೌಡ ಕಿಡ್ನಾಪ್ ಆಗಿರಲಿಲ್ಲ. ಇದೆಲ್ಲಾ ಕಟ್ಟು ಕಥೆ ಎಂದು ಹೇಳಿದ್ದಾನೆ.

ಕಲ್ಮನೆ ನಟರಾಜ್‍ಗೆ ತೇಜಸ್‍ಗೌಡ ಕೊಡ್ಬೇಕಿದ್ದ ಹಣವನ್ನ ಕೊಡಿಸೋಕೆ ಮಧ್ಯಸ್ಥಿಕೆ ವಹಿಸಿದ್ದು ಸತ್ಯ. ಉಳಿದ ಯಾವ ಘಟನೆಯಲ್ಲೂ ನನ್ನ ಹಾಗೂ ಕಲ್ಲಪ್ಪರ ಪಾತ್ರ ಇರಲಿಲ್ಲ ಎಂದು ಹೇಳಿದ್ದಾನೆ ಖಾಂಡ್ಯ.

ಒಟ್ಟಾರೆ ಪ್ರಕರಣದಲ್ಲಿ ಕೇಳಿ ಬಂದ ಎಲ್ಲರನ್ನೂ ಸಿಐಡಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಆದ್ರೀಗ, ಅಂತಿಮವಾಗಿ ಅವ್ರ ವರದಿ ಏನಿರುತ್ತೆ ಅನ್ನೋದು ಮತ್ತಷ್ಟು ಕುತೂಹಲ ಮೂಡಿಸಿದೆ.

You might also like More from author

Leave A Reply

Your email address will not be published.

badge