ಬುದ್ಧಿ ಹೇಳಿದ್ದಕ್ಕೆ ಸಾಯೋ ನಾಟಕ; ಅಪ್ಪ-ಅಮ್ಮನ ಎದುರೇ ಯುವತಿಯ ಜೀವ ಹೋಯ್ತು!

ಬೆಂಗಳೂರು: ಆತ್ಮಹತ್ಯೆ ನಾಟಕ ಮಾಡಲು ಹೋಗಿ ಯುವತಿ ಅಪ್ಪ-ಅಮ್ಮನ ಎದುರೇ ತನ್ನ ಜೀವವನ್ನೇ ಕಳೆದುಕೊಂಡ ಘಟನೆಯೊಂದು ಬೆಂಗಳೂರಿನ ಬಾಪೂಜಿನಗರದಲ್ಲಿ ಬೆಳಕಿಗೆ ಬಂದಿದೆ.

ಬ್ಯಾಟರಾಯನಪುರ ಸಮೀಪದ ಬಾಪೂಜಿನಗರದ ಕೀರ್ತನಾ, ಮೃತ ದುರ್ದೈವಿಯಾಗಿದ್ದು, ಈಕೆ ಮೊದಲ ವರ್ಷದ ಡಿಪ್ಲೋಮಾ ಓದುತ್ತಿದ್ದಳು.

ಆತ್ಮಹತ್ಯೆಗೆ ಕಾರಣವೇನು?: ಡಿಪ್ಲೋಮಾ ಓದುತ್ತಿದ್ದ ಕೀರ್ತನಾ ತನ್ನ ಕ್ಲಾಸಿನಲ್ಲಿ ಓದುತ್ತಿದ್ದ ಗೆಳೆಯನನ್ನು ಪ್ರೀತಿಸುತ್ತಿದ್ದಳು. ಹೀಗಾಗಿ ಆತನೊಂದಿಗೆ ಸುತ್ತಾಡಿಕೊಂಡು ಮನೆಗೆ ಪ್ರತೀ ದಿನ ಕಾಲೇಜಿನಿಂದ ತಡವಾಗಿ ಬರುತ್ತಿದ್ದಳು.ಈ ವಿಚಾರ ಪೋಷಕರ ಗಮನಕ್ಕೆ ತಿಳಿದುಬಂದಿದ್ದು, ಆ ಹುಡುಗನನ್ನು ಬಿಡುವಂತೆ ಒತ್ತಾಯಿಸಿದ್ದಾರೆ. ಬುಧವಾರ ಕೀರ್ತನಾ ಮನೆಗೆ ಲೇಟಾಗಿ ಬಂದಿದ್ದಕ್ಕೆ ಪೋಷಕರು ಮತ್ತೆ ಪ್ರಶ್ನಿಸಿದ್ದಾರೆ. ಇದರಿಂದ ಮನನೊಂದು ಕೀರ್ತನಾ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಳ್ಳಲು ಯತ್ನಿಸಿದ್ದಾಳೆ. ತಕ್ಷಣವೇ ಪೋಷಕರು ಕುಣಿಕೆಯಿಂದ ಆಕೆಯನ್ನು ಕೆಳಗಿಳಿಸಲು ಪ್ರಯತ್ನಿಸಿದ್ದಾರೆ. ಆದ್ರೆ ದುರಾದೃಷ್ಟವಶಾತ್ ಅದಾಗಲೇ ಆಕೆಯ ಪ್ರಾಣಪಕ್ಷಿ ಹಾರಿಹೋಗಿತ್ತು.

ಘಟನೆ ಸಂಬಂಧಿಸಿದಂತೆ ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

LEAVE A REPLY