Sunday, 27th May 2018

Recent News

ಸಂಬಂಧಿಗಳ ಕಣ್ಣೆದುರೇ ಸಮಾಧಿಯಿಂದ ಶವಗಳನ್ನ ಹೊರ ಹಾಕ್ತಾರೆ!

ವಾಷಿಂಗ್ಟನ್: ನಮ್ಮವರನ್ನು ಕಳೆದುಕೊಂಡಾಗ ಆಗುವ ದುಃಖ ಪದಗಳಿಂದ ಹೇಳಲಾಗದು. ಅಂತಹ ದುಃಖದಲ್ಲಿ ಹೂತಿರುವ ಶವಗಳನ್ನು ಸಮಾಧಿಯಿಂದ ಹೊರತೆಗೆದು ಎಸೆಯುವುದು ಎಂತಹವರ ಕಣ್ಣಲ್ಲಿ ನೀರು ತರಿಸುತ್ತದೆ. ಆದರೆ ಅಮೆರಿಕದಲ್ಲಿ ಒಂದು ಕಡೆ ಪ್ರತಿನಿತ್ಯ ಸಮಾಧಿಯಿಂದ ತೆಗೆಯಲಾಗುತ್ತದೆ.

ಹೌದು, ಗ್ವಾಟೆಮಾಲಾ ಎಂಬಲ್ಲಿ ಶವಗಳನ್ನು ಸಮಾಧಿಯಿಂದ ತೆಗೆಯಲಾಗುತ್ತದೆ. ಸುಂದರವಾದ ಸಮಾಧಿಗಳಲ್ಲಿ ನಮ್ಮ ಆತ್ಮೀಯರ ಶವಗಳು ಇರಬೇಕಾದ್ರೆ ಇಲ್ಲಿ ಪ್ರತಿವರ್ಷ ಹೂತಿರುವ ಸ್ಥಳಕ್ಕೆ ನಿರ್ಧಿಷ್ಟ ಹಣವನ್ನು ಪಾವತಿ ಮಾಡಬೇಕಾಗುತ್ತದೆ.

ಒಪ್ಪಂದವಾಗಿರುತ್ತೆ: ಶವ ಹೂತಿರುವ ಮತ್ತು ಸಮಾಧಿ ಮಾಲೀಕರ ನಡುವೆ ಅಂತ್ಯ ಸಂಸ್ಕಾರದ ದಿನದಂದು ಒಪ್ಪಂದವಾಗಿರುತ್ತದೆ. ಇಲ್ಲಿ ಶವ ಹೂತ ಮೇಲೆ ಮೊದಲಿನ 6 ವರ್ಷ ಯಾವುದೇ ಬಾಡಿಗೆ ಇರುವುದಿಲ್ಲ. 6 ವರ್ಷಗಳ ನಂತರ ಪ್ರತಿ ವರ್ಷ ಆ ಶವದ ಸಂಬಂಧಿ ಅಥವಾ ಮಾಲೀಕ 24 ಡಾಲರ್ (1549 ರೂ.) ಹಣವನ್ನು ಪಾವತಿಸಬೇಕಾಗುತ್ತದೆ. ಇದು ಶವವನ್ನು ಹೂಳಿದ್ದ ದಿನದಿಂದ ಈ ಒಪ್ಪಂದ ಜಾರಿಯಲ್ಲಿರುತ್ತದೆ.

ಶವ ಹೂತ ನಂತರ ಮೊದಲ ಉಚಿತ ಆರು ವರ್ಷ ಪೂರ್ಣವಾಗುತ್ತಲೇ ಅದಕ್ಕೆ ಸಂಬಂಧಪಟ್ಟವರು ಹಣವನ್ನು ಪಾವತಿ ಮಾಡಬೇಕಾಗುತ್ತದೆ. ಇಲ್ಲವಾದಲ್ಲಿ ಸ್ಮಶಾನದ ಸಿಬ್ಬಂದಿ ಹೂತಿರುವ ಶವಗಳನ್ನು ಹೊರ ತೆಗೀತಾರೆ. ಖಾಲಿಯಾದ ಸ್ಥಳದಲ್ಲಿ ಮತ್ತೊಮ್ಮೆ ಶವದ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಈ ಹಣ ಕೆಳವರ್ಗದ ಜನರಿಗೆ ದುಬಾರಿಯಾಗಿದೆ.

ಶವಗಳನ್ನ ಪ್ಲಾಸ್ಟಿಕ್ ಹಾಳೆಯಲ್ಲಿ ಇಡ್ತಾರೆ: ಇನ್ನು ಹಣ ಪಾವತಿಯಾಗದ ಶವಗಳನ್ನು ಅವುಗಳ ಬಟ್ಟೆ ಸಹಿತ ಹೊರ ತೆಗೆದು ಪ್ಲಾಸ್ಟಿಕ್ ಕವರ್‍ಗಳಲ್ಲಿ ಸುತ್ತಿಡ್ತಾರೆ. ಶವಗಳನ್ನು ಸುತ್ತಿದ ಬಳಿಕ ಅವುಗಳನ್ನು ಸಾರ್ವಜನಿಕ ಸ್ಥಳವೊಂದರಲ್ಲಿ ಸಾಮೂಹಿಕವಾಗಿ ಹೂಳ್ತಾರೆ. ಹೀಗೆ ಸಾಮುಹಿಕವಾಗಿ ಹೂಳುವುದ್ರಿಂದ ಸತ್ತವರ ಆತ್ಮಗಳು ಅಳುತ್ತವೆ ಎಂಬುವುದು ಇಲ್ಲಿನ ಜನರ ನಂಬಿಕೆಯಾಗಿದೆ.

ಇನ್ನು ಕೆಲ ಬಡವರ್ಗದ ಜನರು ಆರು ವರ್ಷ ಕಾಲಾವಧಿ ಮುಗಿದ ಬಳಿಕ ಸಮಾಧಿ ಆಗಮಿಸಿ ತಮ್ಮವರ ಶವದ ಅವಶೇಷಗಳನ್ನು ತೆಗೆದುಕೊಂಡು ಹೋಗಿ ಪ್ಲಾಸ್ಟಿಕ್ ನಲ್ಲಿ ಸುತ್ತಿ ಹೂಳುತ್ತಾರೆ.

ಇದನ್ನೂ ಓದಿ: ಮೂರು ವರ್ಷಗಳ ನಂತರ ಸಮಾಧಿಯಿಂದ ಹೊರಬಂದು ನಡೆದಾಡಿದ ಮಹಿಳೆ!

 

 

Leave a Reply

Your email address will not be published. Required fields are marked *