ಕ್ರಿಕೆಟ್‍ನಲ್ಲಿ 250 ರೂ. ಬೆಟ್ ಗೆದ್ದು ಪ್ರಾಣವನ್ನೇ ಕಳ್ಕೊಂಡ 12ರ ಬಾಲಕ

ಕೋಲ್ಕತ್ತಾ: 12 ವರ್ಷ ವಯಸ್ಸಿನ ಬಾಲಕನೊಬ್ಬ ತನ್ನ ಸ್ನೇಹಿತನ ಜೊತೆ ಕ್ರಿಕೆಟ್ ಆಟವಾಡಿ ಪಂದ್ಯ ಕಟ್ಟಲಾಗಿದ್ದ 250 ರೂ. ಗೆದ್ದು ಕೊನೆಗೆ ತನ್ನ ಸ್ನೇಹಿತನಿಂದಲೇ ಹತ್ಯೆಗೀಡಾದ ಘಟನೆ ಪಶ್ಚಿಮ ಬಂಗಾಳದಲ್ಲಿ ನಡೆದಿದೆ.

ಇಲ್ಲಿನ ಹೌರಾ ಜಿಲ್ಲೆಯಲ್ಲಿ ಕ್ರಿಕೆಟ್ ಪಂದ್ಯಕ್ಕೆ ಕಟ್ಟಿದ್ದ ಬೆಟ್ಟಿಂಗ್ ಹಣ ನೀಡಲು ನಿರಾಕರಿಸಿ ಬಾಲಕ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ. ಸದ್ಯಕ್ಕೆ ಆರೋಪಿ ಬಾಲಕನನ್ನು ವಶಕ್ಕೆ ಪಡೆದಿದ್ದು, ಹತ್ಯೆಗೀಡಾದ ಬಾಲಕನ ಮೃತದೇಹ ಶನಿವಾರದಂದು ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಹಾಗೂ ಮೃತ ಬಾಲಕ ಇಲ್ಲಿನ ದಸ್ಪಾರಾದ ನಿವಾಸಿಗಳಾಗಿದ್ದು ಕ್ರಿಕೆಟ್ ಆಟವಾಡುವಾಗ 250 ರೂ. ಪಂದ್ಯ ಕಟ್ಟಿದ್ದರು. 12 ವರ್ಷದ ಬಾಲಕ ಪಂದ್ಯ ಗೆದ್ದಿದ್ದು, ಹಣ ಕೊಡುವಂತೆ ಕೇಳಿದ್ದ. ಆದ್ರೆ ಆರೋಪಿ ಬಾಲಕ ಹಣ ಕೊಡಲು ನಿರಾಕರಿಸಿದ್ದು, ಇಬ್ಬರ ಮಧ್ಯೆ ಜಗಳವಾಗಿತ್ತು.

ಅವರು 250 ರೂ. ಬೆಟ್ ಕಟ್ಟಿದ್ದರು. ನನ್ನ ಮಗ ಪಂದ್ಯ ಗೆದ್ದು ಹಣಕ್ಕೆ ಒತ್ತಾಯಿಸಿದ. ಆದ್ರೆ ಆತ ಹಣ ಕೊಡಲು ನಿರಾಕರಿಸಿದ. ನಂತರ ನನ್ನ ಮಗನನ್ನು ಹತ್ತಿರದ ತೋಟವೊಂದಕ್ಕೆ ಕರೆದುಕೊಂಡು ಹೋಗಿ ಅಮಾನವೀಯವಾಗಿ ಥಳಿಸಿದ. ಇಟ್ಟಿಗೆಯಿಂದ ನನ್ನ ಮಗನ ತಲೆಗೆ ಹೊಡೆದ. ಆಗ ಆತನಿಗೆ ಪ್ರಜ್ಞೆ ತಪ್ಪಿತು. ನಂತರ ನನ್ನ ಮಗನನ್ನು ಕೊಂದ ಎಂದು ಮೃತ ಬಾಲಕನ ತಂದೆ ಕನ್ಹೈಯ್ಯ ಪಾಸ್ವಾನ್ ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಆರೋಪಿಯು ಬಾಲಕನನ್ನು ಕೊಂದ ನಂತರ ಮೃತದೇಹವನ್ನು ಗುರುತು ಸಿಗದಂತೆ ಮಾಡಲು ಯತ್ನಿಸಿದ್ದ. ದೇಹವನ್ನು ಎಳೆದುಕೊಂಡು ಹೋಗಿ ಕಾಡು ಪ್ರದೇಶದಲ್ಲಿ ಗಿಡ ಮತ್ತು ಇಟ್ಟಿಗೆಯಿಂದ ಮುಚ್ಚಿಟ್ಟಿದ್ದ ಎಂದು ವರದಿಯಾಗಿದೆ.

ಆರೋಪಿ ಹಾಗೂ ಆತನ ಸ್ನೇಹಿತನೊಬ್ಬನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದು, ಈ ವೇಳೆ ಅವರಲ್ಲಿ ಒಬ್ಬ ಕೊಲೆ ಮಾಡಿದ ಬಗ್ಗೆ ತಪ್ಪೊಪ್ಪಿಕೊಂಡಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.

ನನ್ನ ಮಗ ವಾಪಸ್ ಸಿಗುವುದಿಲ್ಲ. ಆದ್ರೆ ಕೊಲೆಗಾರನಿಗೆ ಶಿಕ್ಷೆಯಾಗಬೇಕು ಎಂದು ಪಾಸ್ವಾನ್ ಹೇಳಿದ್ದಾರೆ.

You might also like More from author

Leave A Reply

Your email address will not be published.

badge