Monday, 28th May 2018

ದುಬೈ ಜಾಕ್‍ಪಾಟ್ ನಲ್ಲಿ 6 ಕೋಟಿ ರೂ. ಬಹುಮಾನ ಗೆದ್ದ ಬೆಂಗಳೂರು ವ್ಯಕ್ತಿ

ದುಬೈ: ಬೆಂಗಳೂರು ಮೂಲದ ವ್ಯಕ್ತಿಯೊಬ್ಬರಿಗೆ ಅದೃಷ್ಟ ಖುಲಾಯಿಸಿದ್ದು, ದುಬೈ ಡ್ಯೂಟಿ ಫ್ರೀ ಮಿಲ್ಲೇನಿಯಮ್ ಡ್ರಾ ನಲ್ಲಿ 1 ಮಿಲಿಯನ್ ಡಾಲರ್(ಅಂದಾಜು 6 ಕೋಟಿ ರೂ.) ಬಹುಮಾನ ಗೆದ್ದಿದ್ದಾರೆ.

ದುಬೈ ಡ್ಯೂಟಿ ಫ್ರೀ ಮಿಲೇನಿಯಮ್ ಮಿಲೇನಿಯರ್ 1999ರಲ್ಲಿ ಆರಂಭವಾದಾಗಿನಿಂದ ಈವರೆಗೆ 124 ಭಾರತೀಯರು ತಲಾ 1 ಮಿಲಿಯನ್ ಡಾಲರ್ ಗೆದ್ದಿದ್ದಾರೆ. ಬೆಂಗಳೂರಿನ ಟಾಮ್ಸ್ ಅರಾಕಲ್ ಮಣಿ(38) ಇದೀಗ ಈ ಸಾಲಿಗೆ ಸೇರ್ಪಡೆಯಾಗಿದ್ದಾರೆ. ದುಬೈ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಾನ್‍ಕೋರ್ಸ್ ಡಿ ನಲ್ಲಿ ಮಣಿ ಅವರ 263 ಸರಣಿಯ ಟಿಕೆಟ್ ನಂಬರ್ 2190 ಡ್ರಾ ಆಗಿದೆ. ಮಣಿ ಅವರು ಕಳೆದ ವರ್ಷ ಡಿಸೆಂಬರ್‍ನಲ್ಲಿ ಈ ಲಾಟರಿ ಟಿಕೆಟ್ ಖರೀದಿಸಿದ್ದರು.

ಇದೀಗ ಲಾಟರಿಯಲ್ಲಿ ಬಹುಮಾನ ಗೆದ್ದಿರುವ ಬಗ್ಗೆ ಪ್ರತಿಕ್ರಿಯೆ ನೀಡಿರೋ ಮಣಿ, ನನಗೆ ಪದಗಳೇ ಬರುತ್ತಿಲ್ಲ. ನಾನು 1 ಮಿಲಿಯನ್ ಡಾಲರ್ ಗೆದ್ದಿದ್ದೀನಿ ಅಂತ ಇನ್ನೂ ನಂಬಲು ಸಾಧ್ಯವಾಗ್ತಿಲ್ಲ. ನನ್ನ ಜೀವನದ ಅತ್ಯಂತ ಖುಷಿಯ ಸುದ್ದಿ ನೀಡಿದ ದುಬೈ ಡ್ಯೂಟಿ ಫ್ರೀ ಗೆ ಧನ್ಯವಾದಗಳು ಎಂದು ಹೇಳಿದ್ದಾರೆ.

ಈ ಪ್ರಖ್ಯಾತ ಪ್ರಮೋಷನ್‍ನಲ್ಲಿ ದುಬೈ ಡ್ಯೂಟಿ ಫ್ರೀ ಸಪ್ರ್ರೈಸ್ ಡ್ರಾ ನಡೆಸಿದ್ದು, ಇಬ್ಬರು ಬಹುಮಾನ ವಿಜೇತರನ್ನ ಘೋಷಿಸಿದೆ. ಅಮೆರಿಕದ ಮಿಸ್ಸೌರಿಯ ಪ್ಯಾಟ್ರಿಕ್ ಆಂಡರ್‍ಸನ್, 1677 ಸರಣಿಯ ಬಿಳಿ ಬಣ್ಣದ ಪೋರ್ಶೆ 911 ಕರ್ರೇರಾ ಕೂಪ್ ಕಾರನ್ನು ಗೆದ್ದಿದ್ದಾರೆ. ಹಾಗೂ ಬೆಲ್ಜಿಯಂನ ಕ್ರಿಕೋರ್ ಕೊಜಾನ್‍ಲಿಯಾನ್ 327 ಸರಣಿಯ ಬಿಎಂಡಬ್ಲ್ಯೂ ಆರ್ ನೈನ್ ಟಿ ಸ್ಕ್ರ್ಯಾಂಬ್ಲರ್ ಮೋಟರ್ ಬೈಕ್ ಗೆದ್ದಿದ್ದಾರೆ.

Leave a Reply

Your email address will not be published. Required fields are marked *