ಸ್ಯಾಂಡಲ್ ವುಡ್ ರೆಬಲ್ ಸ್ಟಾರ್ ಅಂಬರೀಶ್ ಮತ್ತು ನಟಿ ಹಾಗೂ ಸಂಸದೆ ಸುಮಲತಾ ಅಂಬರೀಶ್ ಮದುವೆಯಾಗಿ ಇಂದಿಗೆ ಮೂವತ್ತೊಂದು ವರ್ಷ. ನಟಿಯಾಗಿ ಪರಿಚಯವಾದ ಸುಮಲತಾ ಅವರನ್ನು ಪ್ರೀತಿಸಿ, ಅಂಬರೀಶ್ ಡಿಸೆಂಬರ್ 8ರಂದು ಮದುವೆಯಾದರು. ಈ ಸ್ಟಾರ್ ಜೋಡಿಯ ಮದುವೆಗೆ ಅನೇಕರು ಸಾಕ್ಷಿಯಾಗಿದ್ದರು. ಮೂವತ್ತು ವರ್ಷಗಳ ದಾಂಪತ್ಯ ಜೀವನದ ಬಗ್ಗೆ ಸುಮಲತಾ ಅಂಬರೀಶ್ ಭಾವುಕರಾಗಿಯೇ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.
ಅಂಬರೀಶ್ ಜೊತೆಗಿನ ಕ್ಯೂಟ್ ಆಗಿರುವ ಫೋಟೋವನ್ನ ಹಂಚಿಕೊಂಡಿರುವ ಸುಮಲತಾ, ‘ನಿಮ್ಮೊಂದಿಗೆ ಹೆಜ್ಜೆ ಹಾಕಿದ ಆ ದಿನ, ಆ ಕ್ಷಣ ನಿತ್ಯವೂ ಹೊಸ ಪುಳಕ. ತುಳಿದ ಸಪ್ತಪದಿಯಲ್ಲೂ ನಿಮ್ಮದೇ ಗುಣಗಾನ. ನನ್ನ ಬದುಕಿಗೆ ಬಾಳ ಸಂಗಾತಿಯಾಗಿ ನೀವು ಬಂದ ದಿನದಿಂದಲೂ ನನ್ನೊಳಗೆ ಹೊಸ ಸಂಭ್ರಮ. ಮದುವೆ ದಿನದ ಎಲ್ಲ ನೆನಪುಗಳ ಜೊತೆ ನೀವು ಇದ್ದೀರಿ, ಮತ್ತೆ ಮತ್ತೆ ಆ ದಿನವನ್ನು ನೆನಪಿಸುತ್ತೀರಿ. 31 ವರ್ಷಗಳಲ್ಲಿ ಜೀವಮಾನದ ನೆನಪುಗಳನ್ನು ಬಿತ್ತಿದ್ದೀರಿ. ನೀವು ನೀಡಿದ ಪ್ರೀತಿ ಮತ್ತು ಬಾಂಧವ್ಯದ ಕುರುಹುಗಳು ನನ್ನ ಜೀವಿತಾವಧಿಯ ಕೊಡುಗೆಗಳು. ಮತ್ತೆ ಮತ್ತೆ ಹೇಳುತ್ತೇನೆ. ಮದುವೆಯ ಈ ಬಂಧ, ಅನುರಾಗದ ಅನುಬಂಧ’ ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ವಿದೇಶಿ ಭಾಷೆಗೆ ಡಬ್ ಆಗಲಿದೆ ರಿಷಬ್ ಶೆಟ್ಟಿ ನಟನೆಯ `ಕಾಂತಾರ’
ಅಂಬರೀಶ್ ಮತ್ತು ಸುಮಲತಾ ಮದುವೆಯ ಈ ದಿನದಂದು ಅವರ ಪುತ್ರ ಅಭಿಷೇಕ್ ಅವರ ನಿಶ್ಚಿತಾರ್ಥದ ವಿಷಯವನ್ನು ಅಧಿಕೃತವಾಗಿ ಹಂಚಿಕೊಳ್ಳಲಿದ್ದಾರೆ ಎನ್ನುವ ಸುದ್ದಿಯಿತ್ತು. ಆದರೆ, ಈವರೆಗೂ ಅಂತಹ ಯಾವುದೇ ಮಾಹಿತಿಯನ್ನು ಅವರು ನೀಡಿಲ್ಲ. ಆದರೆ, ಡಿ.11 ರಂದು ಅಭಿಷೇಕ್ ಎಂಗೇಜ್ ಆಗಲಿದ್ದಾರೆ. ಪ್ರಸಾದ್ ಬಿದ್ದಪ್ಪ ಅವರ ಪುತ್ರಿಯ ಜೊತೆ ಅಭಿಷೇಕ್ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ.
ಅಭಿಷೇಕ್ ನಿಶ್ಚಿತಾರ್ಥದ ವಿಷಯವನ್ನು ಈವರೆಗೂ ಅವರ ಕುಟುಂಬ ಗುಟ್ಟಾಗಿಯೇ ಇಟ್ಟಿದೆ. ಆಪ್ತರ ಪ್ರಕಾರ ಬೆಂಗಳೂರಿನ ಪ್ರತಿಷ್ಠಿತ ಹೋಟೆಲ್ ವೊಂದರಲ್ಲಿ ಎಂಗೇಜ್ ಮೆಂಟ್ ನಡೆಯಲಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಹಲವು ಗಣ್ಯರಿಗೆ ಆಹ್ವಾನ ಕೂಡ ನೀಡಲಾಗಿದೆಯಂತೆ.