Sunday, 22nd April 2018

ಮಾಡೆಲ್ ಕಂ ನಟಿ ಕೃತಿಕಾ ಚೌಧರಿ ಕೊಲೆಯ ರಹಸ್ಯ ಬಹಿರಂಗ

ಮುಂಬೈ: ಮಾಡೆಲ್ ಕಂ ನಟಿ ಕೃತಿಕಾ ಚೌಧರಿ (27) ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶ್ವಸಿಯಾಗಿದ್ದಾರೆ.

ನಟಿಯ ಕೊಲೆ ಕೇವಲ 6 ಸಾವಿರ ರೂ.ಗೆ ನಡೆದಿದ್ದು, ಡ್ರಗ್ ಮಾಫಿಯಾಕ್ಕೆ ಕೃತಿಕಾ ಬಲಿಯಾಗಿದ್ದು, ಆಕೆ ಖರೀದಿಸಿದ್ದನ ಡ್ರಗ್ಸ್ ಹಣ ನೀಡದಕ್ಕೆ ಆಕೆಯನ್ನು ಶಕೀಲ್ ಖಾನ್ (33) ಮತ್ತು ಬಸು ದಾಸ್ (40) ಕೊಲೆ ಮಾಡಿದ್ದಾರೆ ಎನ್ನುವ ವಿಚಾರ ಪೊಲೀಸ್ ತನಿಖೆಯಿಂದ ಬಯಲಾಗಿದೆ.

ಜೂನ್ 12ರಂದು ಕೃತಿಕಾರ ಶವ ನಟಿ ವಾಸವಿದ್ದ ನಗರದ ಪಶ್ಚಿಮ ಅಂಧೇರಿಯ ಅಪಾರ್ಟ್‍ಮೆಂಟ್‍ನಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಕೃತಿಕಾಳ ಶವದ ಪಕ್ಕದಲ್ಲಿ ಡ್ರಗ್ಸ್ ಪತ್ತೆಯಾಗಿತ್ತು. ಘಟನೆಯ ಬಳಿಕ ಪೊಲೀಸರು ಅಪಾರ್ಟ್‍ಮೆಂಟ್ ಮುಂಭಾಗದ ದೇವಸ್ಥಾನದ ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೊಪಿಗಳಾದ ಖಾನ್ ಮತ್ತು ದಾಸ್ ಎಂಬವರನ್ನು ಬಂಧಿಸಿದ್ದಾರೆ. ಪೊಲೀಸರು ವಶದಲ್ಲಿರುವ ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗುವುದು ಎಂದು ಮುಂಬೈ ಪೊಲೀಸರು ತಿಳಿಸಿದ್ದಾರೆ.

ಮೂಲತಃ ಉತ್ತರಾಖಂಡ ರಾಜ್ಯದ ಹರಿದ್ವಾರದ ನಿವಾಸಿಯಾಗಿರುವ ಕೃತಿಕಾ ಮುಂಬೈನಲ್ಲಿ ನಲೆಸಿದ್ದರು. ಕಂಗನಾ ರಾಣವತ್ ಅಭಿನಯದ `ರಜ್ಜೋ’ ಸಿನಿಮಾದ ಒಂದು ಚಿಕ್ಕ ಪಾತ್ರದಲ್ಲಿ ಕೃತಿಕಾ ನಟಿಸಿದ್ರು. ಹಾಗೆಯೇ ಕೃತಿಕಾ ಕೆಲವು ಧಾರವಾಹಿಗಳಲ್ಲಿ ನಟನೆ ಮಾಡುತ್ತಾ ಮಾಡೆಲ್ ಆಗಿ ಕೆಲಸ ಮಾಡಿಕೊಂಡಿದ್ದರು. ಕೃತಿಕಾರಿಗೆ ಮದುವೆಯಾಗಿದ್ದು, ಪತಿಯಿಂದ ದೂರವಾಗಿ ಬೇರೆ ಅಪಾರ್ಟ್‍ಮೆಂಟ್ ನಲ್ಲಿ ವಾಸವಾಗಿದ್ರು.

Leave a Reply

Your email address will not be published. Required fields are marked *