Tuesday, 24th April 2018

Recent News

ಮೊಬೈಲ್ ಕಳ್ಳತನವಾಗಿದ್ದಕ್ಕೆ ರೈಲಿಗೆ ತಲೆ ಕೊಟ್ಟ 10ನೇ ತರಗತಿ ವಿದ್ಯಾರ್ಥಿ!

ಚಿತ್ರುದುರ್ಗ: ಮೊಬೈಲ್ ಕಳ್ಳತನವಾಗಿದ್ದಕ್ಕೆ ಮನೆಯಲ್ಲಿ ಬೈಸಿಕೊಳ್ಳಬೇಕು ಎಂಬ ಆತಂಕದಿಂದ ವಿದ್ಯಾರ್ಥಿ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದಲ್ಲಿ ನಡೆದಿದೆ.

ಮಣಿಕಂಠ ಗುತ್ತಕಲ್ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ. ಮಣಿಕಂಠ ನಗರದ ಕಬೀರಾನಂದ ಪ್ರೌಢಶಾಲೆಯಲ್ಲಿ 10ನೇ ತರಗತಿ ವ್ಯಾಸಾಂಗ ಮಾಡುತ್ತಿದ್ದ. ಶನಿವಾರ ಮಣಿಕಂಠ ಶಾಲೆಗೆ 15 ಸಾವಿರ ರೂ. ಬೆಲೆಯ ಮೊಬೈಲ್ ತಂದಿದ್ದ. ಈ ವೇಳೆ ಮೊಬೈಲ್ ಕಳ್ಳತನವಾಗಿದೆ. ಮನೆಯಲ್ಲಿ ವಿಷಯ ತಿಳಿದರೆ ಪೋಷಕರು ಬೈಯ್ಯುತ್ತಾರೆ ಎಂಬ ಆತಂಕದಿಂದ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಸ್ಥಳಕ್ಕೆ ಕೋಟೆ ಪೊಲೀಸರು ಮತ್ತು ರೈಲ್ವೆ ಪೊಲೀಸರು ಭೇಟಿ ನೀಡಿದ್ದು, ಪರಿಶೀಲನೆ ನಡೆಸಿದ್ದಾರೆ.

Leave a Reply

Your email address will not be published. Required fields are marked *